ವಾಟ್ಸಪ್ ಬಳಕೆದಾರರಿಗೆ ಗುಡ್‍ನ್ಯೂಸ್: ಮೆಮೊರಿ ಉಳಿಸಲು ಹೊಸ ಫೀಚರ್

ಬೆಂಗಳೂರು: ವಾಟ್ಸಪ್ ನಲ್ಲಿ ಗ್ರೂಪ್ ಗಳು ಜಾಸ್ತಿ ಆದಂತೆ ವಿಡಿಯೋ, ಫೋಟೋಗಳನ್ನು ಡೌನ್‍ಲೋಡ್ ಆಗುತ್ತಿರುವ ಕಾರಣ ಫೋನ್ ಮೆಮೊರಿಯಲ್ಲಿ ಇವುಗಳು ಸೇವ್ ಆಗುತ್ತಲೇ ಇರುತ್ತದೆ. ಈ ರೀತಿ ಸೇವ್ ಆಗುತ್ತಿರುವ ಕಾರಣ ಆಗಾಗ ಮೆಮೋರಿಯನ್ನು ಡಿಲೀಟ್ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ವಾಟ್ಸಪ್ ತನ್ನ ಬಳಕೆದಾರರಿಗೆ ಹೊಸ ವಿಶೇಷತೆ ನೀಡಿದೆ.

ಹೊಸ ಫೀಚರ್ ನಲ್ಲಿ ವಾಟ್ಸಪ್ ಮೀಡಿಯಾ ಫೈಲ್‍ಗಳು ಗ್ಯಾಲರಿಯಲ್ಲಿ ಹೋಗಿ ಸೇವ್ ಆಗುವ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ಪ್ರತಿ ವೈಯಕ್ತಿಕ ನಂಬರ್‍ಗೂ ಹೈಡ್ ಮೀಡಿಯಾ ಎನ್ನುವ ಅವಕಾಶವನ್ನು ವಾಟ್ಸಪ್ ತನ್ನ ಹೊಸ ಫೀಚರ್ ನಲ್ಲಿ ನೀಡಿದೆ.

ನ್ಯೂ ವರ್ಶನ್ ಅಪ್‍ಡೇಟ್ ಮಾಡಿಕೊಂಡ ನಂತರ ಸೆಟ್ಟಿಂಗ್‍ನಲ್ಲಿ ಚಾಟ್ಸ್ ಆಯ್ಕೆಯನ್ನು ಒತ್ತಿದರೆ ಕೊನೆಯಲ್ಲಿ ಮೀಡಿಯಾ ವಿಸಿಬಲಿಟಿ ಆಯ್ಕೆ ಕಾಣುತ್ತದೆ. ಇದರಲ್ಲಿ `ಎಸ್’ ಮತ್ತು `ನೋ’ ಎನ್ನುವ ಎರಡು ಆಯ್ಕೆಗಳಿರುತ್ತವೆ. ವ್ಯಕ್ತಿಯ ಹಾಗೂ ಗ್ರೂಪ್ ಚಾಟ್‍ನ ಯಾವುದೇ ಮಲ್ಟಿಮೀಡಿಯಾ ಸಂದೇಶಗಳನ್ನು ನಿಮ್ಮ ಗ್ಯಾಲರಿಯಲ್ಲಿ ನೇರವಾಗಿ ಸೇವ್ ಮಾಡದೇ ಇರಲು `ನೋ’ ಎಂದು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಸೇವ್ ಆಗಬೇಕೆಂದಿದ್ದರೆ `ಎಸ್’ ಎಂದು ನೀಡಬೇಕು.

ವಾಟ್ಸಪ್ ನ ಹೊಸ ಫೀಚರ್ ನಿಂದಾಗಿ ಅನಗತ್ಯ ಮಲ್ಟಿಮೀಡಿಯಾ ಸಂದೇಶಗಳಿಂದ ಗ್ಯಾಲರಿ ತುಂಬಿ ಹೋಗುತ್ತಿದ್ದ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಸಿಕ್ಕಂತಾಗಿದೆ. ಈಗ ಸದ್ಯ ವಾಟ್ಸಪ್‍ನ ಲೇಟೆಸ್ಟ್ 2.18 ಬೀಟಾ ಆವೃತ್ತಿಯನ್ನು ಬಳಸುತ್ತಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ.

ವಾಟ್ಸಪ್ ಯಾವುದೇ ಹೊಸ ವಿಶೇಷತೆಗಳನ್ನು ಮೊದಲು ಬೀಟಾ ಆವೃತ್ತಿಯ ಆ್ಯಪ್‍ಗೆ ಪರಿಚಯಿಸುತ್ತದೆ. ಬಳಿಕ ಎಲ್ಲ ಬಳಕೆದಾರರಿಗೆ ಆ ಸೇವೆಯನ್ನು ವಿಸ್ತರಿಸುತ್ತದೆ. ಈ ಆವೃತ್ತಿಯ ವಾಟ್ಸಪ್ ಬೇಕಿದ್ದಲ್ಲಿ ಈಗ ಬಳಕೆ ಮಾಡುತ್ತಿರುವ ವಾಟ್ಸಪ್ ಅನ್ನು ಅನ್ ಇನ್ ಸ್ಟಾಲ್ ಮಾಡಿ ಪ್ಲೇ ಸ್ಟೋರ್ ಗೆ ಹೋಗಿ ವಾಟ್ಸಪ್ ಬೀಟಾ ಅಪ್ಲಿಕೇಶನ್ ಇನ್ ಸ್ಟಾಲ್ ಮಾಡಬೇಕಾಗುತ್ತದೆ.

Comments

Leave a Reply

Your email address will not be published. Required fields are marked *