ಮನೆಯಲ್ಲೇ ಮಾಡಿ ಸವಿಯಿರಿ ರುಚಿ, ಶುಚಿ, ಸ್ವಾದಭರಿತ `ಮಶ್ರೂಮ್ ಫ್ರೈಡ್‌ ರೈಸ್‌ʼ

ಮನೆಯಿಂದ ಹೊರಗೆ ಹೋದ್ರೆ ಸಾಕು ಕಣ್ಣು ಹಾಯಿಸಿದಲ್ಲೆಲ್ಲಾ ಬರೀ ಫಾಸ್ಟ್‌ಫುಡ್‌ಗಳದ್ದೇ ಕಾರುಬಾರು. ಅಲ್ಲಿನ ಬಗೆ ಬಗೆಯ ತಿನಿಸುಗಳು ಬಾಯಲ್ಲಿ ನೀರೂರಿಸುತ್ತವೆ. ಅದರಲ್ಲೂ ಬೇಬಿಕಾರ್ನ್‌ ಫ್ರೈಡ್‌ರೈಸ್‌, ಪನ್ನೀರ್‌ ಫ್ರೈಡ್‌ರೈಸ್‌, ಮಶ್ರೂಮ್‌ ಫ್ರೈಡ್‌ರೈಸ್‌ ಯುವಕ-ಯುವತಿರ ನೆಚ್ಚಿನ ತಿನಿಸುಗಳು. ಇದಕ್ಕಾಗಿ ಕಿಲೋ ಮೀಟರ್‌ಗಟ್ಟಲೆ ಹುಡುಕಿಕೊಂಡು ಬಂದು, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ತಿಂದು ಹೋಗುತ್ತಾರೆ. ಇನ್ಮುಂದೆ ಗಂಟೆಗಟ್ಟಲೇ ನಿಂತು ಕಾಯಬೇಕಿಲ್ಲ. 15 ರಿಂದ 20 ನಿಮಿಷ ಸಮಯವಿದ್ದರೆ ಸಾಕು ರುಚಿ, ಶುಚಿ, ಸ್ವಾದಭರಿತ ಮಶ್ರೂಮ್‌ ಫ್ರೈಡ್‌ರೈಸ್‌ ಅನ್ನು ಮನೆಯಲ್ಲೇ ಮಾಡಿ ಸವಿಯಬಹುದಾಗಿದೆ. ಅದರ ಸಿಂಪಲ್‌ ಟ್ರಿಕ್ಸ್‌ ಇಲ್ಲಿದೆ ನೋಡಿ…

ಬೇಕಾಗಿರುವ ಪದಾರ್ಥಗಳು:

  • ಅನ್ನ – 1 ಕಪ್
  • ಕಟ್ ಮಾಡಿದ ಬಿಳಿ ಅಣಬೆಗಳು – 150 ಗ್ರಾಂ
  • ಸಣ್ಣದಾಗಿ ಕಟ್ ಮಾಡಿದ ಬೆಳ್ಳುಳ್ಳಿ – ಅರ್ಧ ಟೀಸ್ಪೂನ್
  • ಕಟ್ ಮಾಡಿದ ಈರುಳ್ಳಿ – 1 ಕಪ್
  • ಸ್ಪ್ರಿಂಗ್ ಈರುಳ್ಳಿ – ಅರ್ಧ ಕಪ್
  • ಬೀನ್ಸ್ – ಅರ್ಧ ಕಪ್
  • ಕಟ್ ಮಾಡಿದ ಕೊತ್ತಂಬರಿ ಸೊಪ್ಪು – ಅರ್ಧ ಕಪ್
  • ಆಲಿವ್ ಎಣ್ಣೆ – 2 ಟೀಸ್ಪೂನ್
  • ಕರಿಮೆಣಸಿನ ಪುಡಿ – 1 ಟೀಸ್ಪೂನ್
  • ಅಗತ್ಯಕ್ಕೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

  • ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ ಮಧ್ಯಮ ಉರಿಯಲ್ಲಿ 2 ನಿಮಿಷಗಳ ಕಾಲ ಹುರಿಯಿರಿ.
  • ನಂತರ ಅದಕ್ಕೆ ಅಣಬೆಗಳನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹೆಚ್ಚಿನ ಉರಿಯಲ್ಲಿ 5-6 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಹುರಿಯಿರಿ.
  • ಅಣಬೆಯಲ್ಲಿರುವ ನೀರಿನಾಂಶ ಹೋಗುವವರೆಗೂ ಹುರಿಯಿರಿ.
  • ಅಣಬೆಗಳು ತಿಳಿ ಗೋಲ್ಡನ್ ಬಣ್ಣಕ್ಕೆ ತಿರುಗುತ್ತಿದ್ದಂತೆ ಕೊತ್ತಂಬರಿ ಸೊಪ್ಪು ಸೇರಿಸಿ ಒಂದು ನಿಮಿಷ ಫ್ರೈ ಮಾಡಿ.
  • ಈ ಮಿಶ್ರಣಕ್ಕೆ ಅಗತ್ಯದಷ್ಟು ಕರಿಮೆಣಸು ಮತ್ತು ಉಪ್ಪು ಹಾಕಿ ಅದಕ್ಕೆ ಅನ್ನವನ್ನು ಮಿಕ್ಸ್ ಮಾಡಿ. 2-3 ನಿಮಿಷಗಳ ಕಾಲ ಹುರಿಯಿರಿ.

– ಈಗ `ಮಶ್ರೂಮ್ ಫ್ರೈಡ್ ರೈಸ್’ ಸವಿಯಲು ಸಿದ್ಧವಾಗಿದ್ದು, ಅದಕ್ಕೆ ಕೊತ್ತಂಬರಿ ಮತ್ತು ಸ್ಪ್ರಿಂಗ್ ಈರುಳ್ಳಿಯಿಂದ ಅಲಂಕರಿಸಿ ಬಿಸಿಯಾಗಿ ಬಡಿಸಿ.

Live Tv

Comments

Leave a Reply

Your email address will not be published. Required fields are marked *