ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ: ರೇಣುಕಾಚಾರ್ಯ

ದಾವಣಗೆರೆ: ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ ಆಯ್ತು ಎಂದು ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.

ಗೃಹ ಸಚಿವರ ಮನೆ ಮೇಲೆ ಎಬಿವಿಪಿ ವಿದ್ಯಾರ್ಥಿಗಳು ಮುತ್ತಿಗೆ ಹಿನ್ನೆಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಹಿಂದೂ ಯುವಕರಿಗೆ ಮನವಿ ಹಾಗೂ ಕ್ಷಮೆಯಾಚಿಸುತ್ತೇನೆ. ಕಠಿಣ ಕ್ರಮ ತೆಗೆದುಕೊಳ್ಳಲು ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡಕ್ಕೆ ವಹಿಸಿದೆ ಎಂದು ವಿವರಿಸಿದರು. ಇದನ್ನೂ ಓದಿ: ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ 

ಸಿಎಂ ಬೊಮ್ಮಾಯಿ ಅವರಿಗೆ ಈ ಪ್ರಕರಣದಿಂದ ಆಘಾತವಾಗಿದೆ, ನೋವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದರೂ ನಮ್ಮ ಜನರನ್ನು ರಕ್ಷಣೆ ಮಾಡಲಾಗುತ್ತಿಲ್ಲ ಎಂಬ ನೋವು ಇದೆ. ಯುವಕರು ಹಾಗೂ ಮುಖಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ಕಳೆದುಕೊಂಡರೇ ನಾವು ಬಲಿಪಶುಗಳಾಗುತ್ತೇವೆ ಎಂದು ತಿಳಿಸಿದರು.

ಎನ್‍ಕೌಂಟರ್ ಜೊತೆಗೆ ಆಸ್ತಿ ಮುಟ್ಟುಗೋಲು ಹಾಕಬೇಕು. ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಿದ್ದಾಗ ಅಧಿಕಾರದಲ್ಲಿದ್ದು ಏನು ಸಾರ್ಥಕ ಆಯ್ತು ಹೇಳಿ. ಅವರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ಭರವಸೆ ಕೊಟ್ಟರು.

ಗೃಹ ಸಚಿವರ ವೈಫಲ್ಯದ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಸಿಎಂ ರಾಜೀನಾಮೆ ಕೇಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಏನು ನೈತಿಕ ಹಕ್ಕು ಇದೆ. ನಿಮ್ಮ ಅಧಿಕಾರ ಇದ್ದಾಗ 30ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ಆಯ್ತು, ಆಗ ನೀವು ರಾಜೀನಾಮೆ ನೀಡಿದ್ರಾ. ಸಮಾಜಘಾತುಕಗಳ ಕೇಸ್ ಸದನದಲ್ಲಿ ಇಟ್ಟು ವಾಪಸ್ಸು ಪಡೆದ್ರಿ. ಇಲ್ಲಿ ಆರೋಪ ಪ್ರತ್ಯಾರೋಪ ಮಾಡುವ ಬದಲು ಹಿಂದೂಗಳ ಜೊತೆ ನಾವು ಇದ್ದೇವೆ ಹತ್ಯೆ ಮಾಡಿದವರನ್ನು ಎನ್‍ಕೌಂಟರ್ ಮಾಡಿ ಎಂದು ಹೇಳಿ ಎಂದು ಸವಾಲ್ ಹಾಕಿದರು.

ಹರ್ಷ, ಪ್ರವೀಣ್ ಕೊಲೆಯಾಗಿ ನಾಳೆ ನಾವು ಆಗಬಹುದು ಎಂದು ಭಯಭೀತರಾಗಿದ್ದಾರೆ. ನಿಮ್ಮ ಜೊತೆ ನಮ್ಮ ಸಂಘಟನೆ, ಸರ್ಕಾರವಿದೆ. ಕಠಿಣ ಕ್ರಮ ಜರಿಗಿಸಲು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಬಂದಾಗ ನಮಗೆ ರಕ್ಷಣೆ ಇದೆ ಎಂದು ಕೊಂಡಿದ್ದರು. ಸಿದ್ದರಾಮಯ್ಯ ಸರ್ಕಾರ ಇದ್ದಾಗ 25ಕ್ಕೂ ಹೆಚ್ಚು ಹಿಂದೂ ಯುವಕರ ಹತ್ಯೆಯಾಗಿತ್ತು. ಆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಗೂಂಡಾಗಳು, ಸಮಾಜದ ಘಾತುಕ ಶಕ್ತಿ, ಭಯೋತ್ಪಾದಕರು ನಮ್ಮ ಹಿಂದೂಗಳ ಹತ್ಯೆ ಮಾಡಿದ್ರು ಎಂದು ಆಕ್ರೋಶ ಹೊರಹಾಕಿದರು.

ಅಂದು ಅವರು ಹಾಕಿದಂತಹ ಕೇಸ್‍ಗಳನ್ನು ಅಂದಿನ ಸರ್ಕಾರ ವಾಪಸ್ಸು ಪಡೆಯಿತು. ಕೇಸ್ ಹಾಕ್ತಾರೆ ವಾಪಸ್ಸು ಪಡೆಯುತ್ತಾರೆ ಎಂದು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಸಿಎಂ ಅವರು ಈ ಘಟನೆ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಸರ್ಕಾರ ಇದ್ದರೂ ನಮ್ಮ ಕಾರ್ಯಕರ್ತರ ರಕ್ಷಣೆಯಾಗುತ್ತಿಲ್ಲ. ನಾವು ರಾಜೀನಾಮೆ ನೀಡುತ್ತೇವೆ ಎಂದಾಗ ಸಿಎಂ ಸಂಘ ಪರಿವಾರದವರು ಕರೆದು ಮಾತನಾಡಿದರು ಎಂದರು. ಇದನ್ನೂ ಓದಿ: ಅಂಬುಲೆನ್ಸ್ ಟಯರ್ ಬದಲಿಸಲು ಸಹಾಯ ಮಾಡಿದ ರೇಣುಕಾಚಾರ್ಯ

ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಸರ್ಕಾರ ಜೊತೆ ನಿಲ್ಲಿ ಎಂದು ಹೇಳಿದ್ದಾರೆ. ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಕೇವಲ ಬಾಯಿಮಾತಿನಲ್ಲಿ ಹೇಳಿದರೆ ಸಾಲದು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಂಧ್ರದಲ್ಲಿ ರೇಪ್ ಮಾಡಿದವರಿಗೆ ಹೇಗೆ ಎನ್ ಕೌಂಟರ್ ಮಾಡಿದ್ರೋ, ಅದೇ ರೀತಿ ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳಿದರು.

Congress

ಹರ್ಷನನ್ನ ಕೊಲೆ ಮಾಡಿದವರು ಜೈಲಿನಲ್ಲಿ ಮೋಜು ಮಸ್ತಿ ಮಾಡ್ತಾ ಇದ್ದಾರೆ. ಯಾರೋ ಅಧಿಕಾರಿ ಮಾಡಿದ್ದಕ್ಕೆ ಇಡೀ ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಿದೆ. ಇಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಎಂದು ಆಗ್ರಹ ನೀಡಿದರು. ಇದನ್ನೂ ಓದಿ: ರೈಲ್ವೆ ಹಳಿ ಪಕ್ಕದಲ್ಲಿ ಮೃತದೇಹ ಪತ್ತೆ – ಕೊಲೆಯ ಶಂಕೆ

ಹಿಂದೂ ಯುವಕರು ಬಲೆ ತೊಟ್ಟಿಕೊಂಡಿಲ್ಲ, ನಿಮ್ಮ ಜೊತೆ ನಾವು ಇದೀವಿ. ಎಲ್ಲರೂ ರಾಜೀನಾಮೆ ವಾಪಸ್ಸು ಪಡೆಯಬೇಕು ಎಂದು ಮನವಿ ಮಾಡಿದರು. ಈ ರೀತಿ ಪ್ರತಿಭಟನೆಯಿಂದ ಕಾಂಗ್ರೆಸ್‍ಗೆ ಲಾಭ ಆಗುತ್ತದೆ. ಅವರಿಗೆ ಆಹಾರವಾಗಬಾರದು. ಯಾವುದೇ ಕಾರಣಕ್ಕೂ ಕಾನೂನು ಕೈ ತೆಗೆದುಕೊಳ್ಳಬಾರದು ಎಂದು ಕೇಳಿಕೊಂಡರು.

ಸಮಾಜಘಾತುಕ ಶಕ್ತಿಗಳಿಗೆ ಎನ್‍ಕೌಂಟರ್ ಮಾಡಬೇಕು. ನಾನು ಎಲ್ಲ ತ್ಯಾಗಕ್ಕೂ ಸಿದ್ಧ ಎಂದು ಹೇಳಿದ್ದೇನೆ. ನಮ್ಮ ಸರ್ಕಾರ ದುಷ್ಟಶಕ್ತಿಗಳನ್ನು ಮಟ್ಟ ಹಾಕುತ್ತದೆ. ಯಾರೂ ಕೂಡ ಕಾನೂನು ಕೈಗೆ ತೆಗೆದುಕೊಂಡ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಅಲ್ಪಸಂಖ್ಯಾತ ಗೂಂಡಾಗಳು ಅಟ್ಟಹಾಸದಿಂದ ಮೆರೆಯುತ್ತಿದ್ದಾರೆ. ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಮತ್ತೆ-ಮತ್ತೆ ಒತ್ತಿ ಹೇಳಿದರು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *