ಸಿನಿಮಾದವರು 90 ಹೊಡಿ ಅಂದ್ರು, ಸೆನ್ಸಾರಿನವರು 90 ಬಿಡಿ ಅಂದ್ರು: ಬಿರಾದಾರ 500ನೇ ಸಿನಿಮಾದ ಅಸಲಿ ಸ್ಟೋರಿ ಏನು?

ಹಾಸ್ಯ ನಟ ಬಿರಾದಾರ್ ನಾಯಕನಾಗಿ ನಟಿಸುತ್ತಿರುವ ‘90 ಹೊಡಿ ಮನೀಗ್ ನಡಿ’ ಚಿತ್ರವು ಸೆನ್ಸಾರ್ ಅಂಗಳದಲ್ಲಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಈ ಸಿನಿಮಾಗೆ ಟೈಟಲ್ ಕೊಟ್ಟಿದ್ದರೂ, ಸೆನ್ಸಾರ್ ಮಂಡಳಿಯು ಮಾತ್ರ ತಕರಾರು ಎತ್ತಿತ್ತು. ‘90 ಹೊಡಿ ಮನೀಗ್ ನಡಿ’ ಎಂದರೆ ಜನರನ್ನು ನೇರವಾಗಿ  ಕುಡಿತಕ್ಕೆ ಪ್ರಚೋದಿಸಿದಂತಾಗುತ್ತದೆ’ ಎನ್ನುವುದು ಸೆನ್ಸಾರ ಮಂಡಳಿಯ ವಾದವಾಗಿತ್ತು. ಹಾಗಾಗಿ ಜನರಿಗೆ ಕುಡಿಸಬೇಡಿ, ಬಿಡಿಸಿ ಎಂದು ನೇರವಾಗಿಯೇ ಮಂಡಳಿಯ ಅಧಿಕಾರಿಗಳು ಮತ್ತು ಸದಸ್ಯರು ಚಿತ್ರತಂಡಕ್ಕೆ ಸೂಚಿಸಿತ್ತು. ಕುಡಿಸುವ ಹುಮ್ಮಸ್ಸಿನಲ್ಲಿಯೇ ಇದ್ದ ಚಿತ್ರತಂಡವು ಒಲ್ಲದ ಮನಸ್ಸಿನಿಂದ ಕೊನೆಗೂ ಶೀರ್ಷಿಕೆಯನ್ನು ಬದಲಾಯಿಸಿದೆ. ಅದು ‘ಕುಡಿ’ ಇರುವ ಕಡೆ ‘ಬಿಡಿ’ ಎಂದು ಮಾಡಿ ಅದೇ ಶೀರ್ಷಿಕೆಯನ್ನೇ ಮುಂದುವರೆಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

ಇದೊಂದು ಕಾಮಿಡಿ, ಕ್ರೈಮ್ ಥ್ರಿಲ್ಲರ್ ಕಥೆ ಆಧರಿಸಿದ ಚಿತ್ರವಂತೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ನಾಗೇಂದ್ರ ಪ್ರಸಾದ್ ಮತ್ತು ಶಿವು ಬೋರಗಿ ಅವರ ಸಾಹಿತ್ಯವಿದೆ. ತಾರಾಗಣದಲ್ಲಿ ಬಿರಾದಾರ್ ಜೊತೆ ನೀತಾ ಮೈಂದರ್ಗಿ,  ಪ್ರೀತು ಪೂಜಾ, ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಮೊದಲಾವದರು ಇದ್ದಾರೆ. ಇದನ್ನೂ ಓದಿ:  ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು

ಸಿನಿಮಾ ಮತ್ತೊಂದು ವಿಶೇಷ ಸಂಗತಿ ಅಂದರೆ, ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ವೈಜನಾಥ ಬಿರಾದಾರ್ ಅವರ ಅಭಿನಯದ ಐನೂರನೇ ಚಿತ್ರ ಇದಾಗಿದೆ.

Comments

Leave a Reply

Your email address will not be published. Required fields are marked *