ನಿಮ್ಮ ವರಿಷ್ಠೆಯ ಮೂಲ ಯಾವುದು?: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸವಾಲ್

ಉಡುಪಿ: ಆರ್‌ಎಸ್‌ಎಸ್‌ನ ಮೂಲದ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿಯವರ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರ ಕೊಡಿ ಎಂದು ಕೊಡಗು ಮೈಸೂರು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.

Siddaramaiah

ಆರ್‌ಎಸ್‌ಎಸ್‌ನವರು ಮೂಲತಃ ಭಾರತೀಯರಲ್ಲ, ಅವರು ಆರ್ಯರು. ದ್ರಾವಿಡರು ಮಾತ್ರ ಮೂಲ ಭಾರತೀಯರು ಎಂದು ಹೇಳಿಕೆ ನೀಡಿ ಚರ್ಚೆಯ ವಿಷಯವಾಗಿದ್ದ ಸಿದ್ದರಾಮಯ್ಯನಿಗೆ ಪ್ರತಾಪ್ ಸಿಂಹ ಉಡುಪಿಯಲ್ಲಿ ತಿರುಗೇಟು ನೀಡಿದರು. ಇದನ್ನೂ ಓದಿ: ವಿಚಾರ ನಪುಂಸಕರು ಪಠ್ಯ ಪರಿಷ್ಕರಣಾ ವಿವಾದ ಸೃಷ್ಟಿಸಿ ಮೈಕಾಸುರರಾಗಿದ್ದಾರೆ: ಪ್ರತಾಪ್ ಸಿಂಹ

ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ಸೋನಿಯಾ ಗಾಂಧಿ ಅವರನ್ನು ಏಕವಚನದಲ್ಲಿ ಮಾತನಾಡುತ್ತಿದ್ದರು. ಈಗ ಅವರದ್ದೇ ಪಕ್ಷಕ್ಕೆ ಹೋಗಿ ಮಹಾತಾಯಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಮಹಾತಾಯಿ, ಮಹಾನಾಯಕಿ ಎಂದು ಒಪ್ಪಿಕೊಳ್ಳುವ ದಯನೀಯ ಸ್ಥಿತಿಯಲ್ಲಿದ್ದಾರೆ ಎಂದು ಟೀಕಿಸಿದರು.

ನೀವು ಆರ್‌ಎಸ್‌ಎಸ್ ಮೂಲ ಹುಡುಕುವ ಮೊದಲು ಸೋನಿಯಾ ಗಾಂಧಿ ಮೂಲ ಹುಡುಕಿ, ಕರ್ನಾಟಕದ ಜನತೆಗೆ ಅದನ್ನು ಮೊದಲು ತಿಳಿಸಿ. ಬಳಿಕ ಬೇರೆಯವರ ಬಗ್ಗೆ ಪ್ರಶ್ನೆ ಮಾಡಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯರಿಗೆ ತಾಕತ್ ಇದ್ರೆ ಗೋ ಮಾಂಸ ತಿಂದು ತೋರಿಸಲಿ: ಪ್ರಭು ಚೌಹಾಣ್ ಸವಾಲ್

 

Comments

Leave a Reply

Your email address will not be published. Required fields are marked *