ನಿರ್ಮಾಪಕ ಜಾಕ್ ಮಂಜುಗೆ ಏನಾಗಿದೆ?: ಅಪ್ ಡೇಟ್ ಕೊಟ್ಟ ಕಿಚ್ಚ ಸುದೀಪ್

ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ, ಕಿಚ್ಚ ಸುದೀಪ್ ಅವರ ಆತ್ಮೀಯ ಸ್ನೇಹಿತ ಜಾಕ್ ಮಂಜು ಅವರು ಆಸ್ಪತ್ರೆಗೆ ದಾಖಲಾಗಿದ್ದ ಫೋಟೋಗಳು ಬೆಳಗ್ಗೆಯಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದವು. ಹೃದಯ ಸಂಬಂಧಿ ಖಾಯಿಲೆ ಕಾರಣಕ್ಕಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸುದ್ದಿ ಆಯಿತು. ಆನಂತರ ಕಾಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇದೀಗ ಮನೆಯಲ್ಲಿದ್ದಾರೆ ಎಂದು ಹೇಳಲಾಯಿತು. ಆದರೆ, ಕಿಚ್ಚ ಸುದೀಪ್ ಹೇಳುವುದೇ ಬೇರೆ.

ಜಾಕ್ ಮಂಜು ಅವರ ಆರೋಗ್ಯದ ಕುರಿತಂತೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, “ನನ್ನ ಸಹೋದರ ಮತ್ತು ಗೆಳೆಯ ಜಾಕ್ ಮಂಜು ಆರೋಗ್ಯವಾಗಿದ್ದಾರೆ. ಇಂದು ಆಸ್ಪತ್ರೆಯಿಂದ ಅವರು ಡಿಸ್ ಚಾರ್ಜ್ ಆಗುತ್ತಿದ್ದಾರೆ. ಮುನ್ನೆಚ್ಚರಿಕೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಏನೂ ಇಲ್ಲ. ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಫೋಟೋಗಳು ಎಲ್ಲರನ್ನೂ ಆತಂಕ್ಕೀಡು ಮಾಡಿದ್ದವು. ಅವರು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ಬರೆದಿದ್ದಾರೆ ಸುದೀಪ್.

ಹದಿನೈದು ದಿನಗಳ ಹಿಂದೆ ಮೆಟ್ಟಿಲು ಹತ್ತುವಾಗ, ಜಾರಿ ಬಿದ್ದಿದ್ದಾರೆ. ಹಾಗಾಗಿ ಕಾಲಿಗೆ ಪೆಟ್ಟಾಗಿತ್ತು. ನೋವು ಕಡಿಮೆ ಆಗದೇ ಇರುವ ಕಾರಣಕ್ಕಾಗಿ ಆಸ್ಪತ್ರೆಗೆ ತೆರಳಿ ಅದಕ್ಕೆ ಬೇಕಾದ ಚಿಕಿತ್ಸೆ ಪಡೆದಿದ್ದಾರೆ. ಅದರ ಹೊರತಾಗಿ ಅವರಿಗೆ ಏನೂ ಆಗಿಲ್ಲ.

ಜಾಕ್ ಮಂಜು ಅವರು ಆಸ್ಪತ್ರೆ ಸೇರಿರುವ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಸೂಕ್ತ ಮಾಹಿತಿ ಕೂಡ ದೊರೆಕಿರಲಿಲ್ಲ. ಅಲ್ಲದೇ, ಅರೆಬರೆಯ ಮಾಹಿತಿಗಳು ಹರಿದಾಡಿದ್ದರಿಂದ ಹೃದಯ ಸಂಬಂಧಿ ಸಮಸ್ಯೆಗೆ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಆಗಿತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.

Comments

Leave a Reply

Your email address will not be published. Required fields are marked *