ಕೋಲಾರ: ಸಾವು ಬದುಕಿನ ನಡುವೆ ಹೋರಾಡುತ್ತಿರುವ ವ್ಯಕ್ತಿಗಳಿಗೆ ಸಹಾಯ ಮಾಡಿ ಎಂದು ಮಾಧ್ಯಮಗಳು ಸಾಕಷ್ಟು ಬಾರಿ ಸುದ್ದಿ ಪ್ರಸಾರ ಮಾಡಿದರೂ ಕೋಲಾರದ ಜನ ಮಾನವೀಯತೆಯನ್ನು ಮರೆತಿದ್ದಾರೆ.
ಜನರು ನೋಡ ನೋಡುತ್ತಿದ್ದಂತೆ ಹಾರೋಹಳ್ಳಿ ನಿವಾಸಿ ನಂಜಪ್ಪ(70) ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಪಾಯದಲ್ಲಿದ್ದಾಗ ರಕ್ಷಣೆ ಮಾಡಬೇಕಾದ ಜನ ನಂಜಪ್ಪ ಅವರ ಕೊನೆ ಕ್ಷಣಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು ಶವವನ್ನು ಹುಡುಕುತ್ತಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
https://www.youtube.com/watch?v=1AdWGm0-7yY





Leave a Reply