7 ವರ್ಷದಲ್ಲಿ ಅವರೇನು ಮಾಡಿದ್ದಾರೆ? – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

ಲಕ್ನೋ: ಏಳು ವರ್ಷಗಳಲ್ಲಿ ಬಿಜೆಪಿ ಸರ್ಕಾರ ರಾಷ್ಟ್ರಕ್ಕೆ ಏನು ಮಾಡಿದೆ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹೋದರ ರಾಹುಲ್ ಗಾಂಧಿಯವರೊಂದಿಗೆ ಉತ್ತರ ಪ್ರದೇಶದ ಅಮೆಥಿಯಲ್ಲಿ ಶನಿವಾರ ರ್‍ಯಾಲಿ ನಡೆಸಿದರು. ಈ ವೇಳೆ ಕೋವಿಡ್-19 ಎರಡನೇ ಅಲೆ ಮತ್ತು ಬೆಲೆ ಏರಿಕೆಯಿಂದಾಗಿ ಜನರ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಮೃತಸಾರದ ಸ್ವರ್ಣ ಮಂದಿರ ಅಪವಿತ್ರಗೊಳಿಸಲು ಯತ್ನ – ಕೋಪ್ರೋದ್ರಿಕ್ತ ಗುಂಪಿನಿಂದ ಹತ್ಯೆ

ಕೋವಿಡ್-19 ಮೊದಲನೇ ಅಲೆ ವೇಳೆ ಬಿಜೆಪಿ ಏನು ಮಾಡಿದೆ? ಆಕ್ಸಿಜನ್ ಕೊರತೆಗೆ ಪಕ್ಷವು ಕಾರಣವಾಗಿತ್ತು. ಎರಡನೇ ಅಲೆ ವೇಳೆ ಸಾವಿನ ಪ್ರಮಾಣ ಹೆಚ್ಚಾಗಿತ್ತು. ಅದರಲ್ಲಿಯೂ ಆಕ್ಸಿಜನ್ ಮತ್ತು ವೈದ್ಯಕೀಯ ಚಿಕಿತ್ಸೆ ಕೊರತೆ ಹೆಚ್ಚಾಗಿತ್ತು ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಬಂದು 74 ವರ್ಷಗಳಾಗಿದ್ದು ಕಾಂಗ್ರೆಸ್ ತನ್ನ ಆಡಳಿತದಲ್ಲಿ ಭಾರತಕ್ಕೆ ಕೊಂಚವು ಏನನ್ನು ಸಹ ಮಾಡಿಲ್ಲ ಎಂದು ಬಿಜೆಪಿ ಆಗಾಗ ಆರೋಪಿಸುತ್ತಿರುತ್ತದೆ. ಆದರೆ ಏಳು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಅಮೇಥಿಯಲ್ಲಿ ಏನು ಮಾಡಿದೆ? ಬಿಜೆಪಿ ಪರವಾಗಿ ಏಕಪಕ್ಷೀಯ ಅಭಿವೃದ್ಧಿ ಮಾತ್ರ ನಡೆದಿದೆ ಮತ್ತು ಬೆಲೆ ಏರಿಕೆಯಿಂದ ಜನರು ಕಷ್ಟಪಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಎಂದಿಗೂ ಸುರಕ್ಷಿತರಾಗಿರುವುದಿಲ್ಲ:  ಓವೈಸಿ

ಪ್ರತಿಭಟನಾ ನಿರತ ರೈತರನ್ನು ಕೊಂದ ಆರೋಪ ಹೊತ್ತಿರುವ ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಇನ್ನೂ ಏಕೆ ವಜಾಗೊಳಿಸಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗಿನಿಂದ ಸುಳ್ಳಿನ ಜಾಲವನ್ನು ಹರಡುತ್ತಿದೆ ಎಂದು ಕೆಂಡಕಾರಿದರು.

Comments

Leave a Reply

Your email address will not be published. Required fields are marked *