ವೀಕೆಂಡ್ ವಿತ್ ರಮೇಶ್: ಮೊದಲ ಅತಿಥಿಯಾಗಿ ನಟಿ ರಮ್ಯಾ

ಕಿರುತೆರೆಯ ಬಿಗ್ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh 5) ಟಿವಿಪರದೆಯಲ್ಲಿ ಅಪ್ಪಳಿಸಲು ರೆಡಿಯಾಗಿದೆ. ಮೋಹಕತಾರೆ ರಮ್ಯಾ ಅವರ ಸಾಧನೆಯ ಕಥೆ ಹೇಳಲು ರಮೇಶ್‌ ಅರವಿಂದ್‌ (Ramesh Aravind) ರೆಡಿಯಾಗಿದ್ದಾರೆ. ಮೊದಲ ಅತಿಥಿಯಾಗಿ ರಮ್ಯಾ (Ramya) ಪಾಲ್ಗೊಂಡಿದ್ದಾರೆ.

ಪ್ರೇಕ್ಷಕರ ಅಚ್ಚುಮೆಚ್ಚಿನ ಶೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಕಿರುತೆರೆಯಲ್ಲಿ ಬರುತ್ತಿದೆ. ಈ ಶೋಗಾಗಿ ಕಾಯುವ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ. ಮಾರ್ಚ್ 25ರಿಂದ ರಾತ್ರಿ 9ಕ್ಕೆ ವೀಕೆಂಡ್‌ನಲ್ಲಿ ಪ್ರತಿ ಶನಿವಾರ-ಭಾನುವಾರ ಪ್ರಸಾರವಾಗಲಿದೆ. ಈ ಬೆನ್ನಲ್ಲೇ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದರ ಬಗ್ಗೆ ರಿವೀಲ್ ಆಗಿದೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5ರಲ್ಲಿ ಮೊದಲ ಎಪಿಸೋಡ್‌ನಲ್ಲಿ ಮೋಹಕತಾರೆ ರಮ್ಯಾ ಭಾಗವಹಿಸಿದ್ದಾರೆ. ತಮ್ಮ ಜೀವನದ ಕಥೆಯನ್ನ ಕಾರ್ಯಕ್ರಮದಲ್ಲಿ ನಟಿ ಹಂಚಿಕೊಂಡಿದ್ದಾರೆ. ಬಾಲ್ಯ, ಸಿನಿಮಾ, ರಾಜಕೀಯ, ಅಪ್ಪು (Appu)  ಜೊತೆಗಿನ ನೆನಪುಗಳನ್ನ ಬಗ್ಗೆ ರಮ್ಯಾ ಮಾತನಾಡಿದ್ದಾರೆ. ಈ ಎಪಿಸೋಡ್ ಮಾರ್ಚ್ 25ರಂದು ಪ್ರಸಾರವಾಗಲಿದೆ.

ಎರಡನೇ ಎಪಿಸೋಡ್‌ನಲ್ಲಿ ಡ್ಯಾನ್ಸ್ ಕಿಂಗ್ ಪ್ರಭುದೇವ (Prabhudeva) ಅವರು ಭಾಗವಹಿಸಿದ್ದಾರೆ. ಡ್ಯಾನ್ಸ್, ಸಿನಿಮಾ, ಸ್ಯಾಂಡಲ್ವುಡ್, ಬಾಲಿವುಡ್ ಸಿನಿಮಾಗಳ ಅನುಭವದ ಜೊತೆಗೆ ಸೋಲು ಮತ್ತು ಗೆಲುವಿನ ದಿನಗಳ ಬಗ್ಗೆ ಪ್ರಭುದೇವ ಮಾತನಾಡಿದ್ದಾರೆ.

ಇನ್ನೂ ಎಲೆಕ್ಷನ್ ಬಳಿಕ ರಾಜಕಾರಣಿಗಳು ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಸೀಸನ್‌ನಲ್ಲಿ ಧ್ರುವ ಸರ್ಜಾ, ರಚಿತಾ ರಾಮ್, ಮಾಲಾಶ್ರೀ, ಡಾ.ಮಂಜುನಾಥ್, ಸದ್ಗುರು ಸೇರಿದಂತೆ ಹಲವು ಸಾಧಕರು ಇರುತ್ತಾರೆ ಎಂದು ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *