Weekend With Ramesh: ರಕ್ಷಿತಾ ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮಾತು

ಸ್ಯಾಂಡಲ್‌ವುಡ್ (Sandalwood) ನಟಿ ರಮ್ಯಾ (Ramya) ಚಿತ್ರರಂಗಕ್ಕೆ ಕಂಬ್ಯಾಕ್ ಆದಮೇಲೆ ಅವರದ್ದೇ ಹಾವಳಿ. ಒಂದು ದಶಕಗಳ ಕಾಲ ಚಿತ್ರರಂಗ ಆಳಿದ ಮೋಹಕತಾರೆ ಇದೀಗ `ವೀಕೆಂಡ್ ವಿತ್ ರಮೇಶ್ 5′ ಶೋನಲ್ಲಿ ಭಾಗವಹಿಸಿದ್ದಾರೆ. ಶೋ ಪ್ರಸಾರವಾಗಲು ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಸದ್ಯ ರಮ್ಯಾ ಪ್ರೋಮೋ ಸದ್ದು ಮಾಡ್ತಿದೆ. ರಕ್ಷಿತಾ (Rakshitha)  ಜೊತೆಗಿನ ಸ್ಪರ್ಧೆ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

ಅಭಿ ಚಿತ್ರದಲ್ಲಿ ಪುನೀತ್‌ಗೆ (Puneeth) ನಾಯಕಿಯಾಗುವ ಮೂಲಕ ರಮ್ಯಾ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ಸಮಯದಲ್ಲಿ ರಕ್ಷಿತಾ ಕೂಡ ಪೀಕ್‌ನಲ್ಲಿದ್ದರು. ಇವರಿಬ್ಬರು ಒಂದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇಬ್ಬರ ನಡುವೆ ಸ್ಪರ್ಧೆ ಅನ್ನೋದು ಮೊದಲ ಚಿತ್ರದಿಂದಲೇ ಶುರುವಾಗಿತ್ತು. ಪ್ರತಿ ಸಿನಿಮಾ ಸೆಲೆಕ್ಷನ್ ವೇಳೆ ಇಬ್ಬರ ನಡುವೆ ಪೈಪೋಟಿ ಇರುತ್ತಿತ್ತು. ಪ್ರತಿಯೊಂದು ಚಿತ್ರದ ವಿಚಾರಕ್ಕೂ ಜಿದ್ದಾಜಿದ್ದಿ ಏರ್ಪಟ್ಟಿತ್ತು.

ರಮ್ಯಾ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅವರು ನಟಿಸಿದ ಬಹುತೇಕ ಸಿನಿಮಾಗಳು ಸಿನಿಮಾ ಲಿಸ್ಟ್‌ಗೆ ಸೇರಿದವು. ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂ 1 ನಟಿಯಾಗಿ ಮೆರೆದ ಅವರಿಗೆ ರಕ್ಷಿತಾ ಜೊತೆ ಸ್ಪರ್ಧೆ ಇತ್ತಂತೆ. `Weekend With Ramesh’ ಪ್ರೋಮೋದಲ್ಲಿ ರಕ್ಷಿತಾ ಜೊತೆ ಇದ್ದಿದ್ದ ಸ್ಪರ್ಧೆಯ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. 2002ರಲ್ಲಿ ರಕ್ಷಿತಾ ಜೊತೆಗಿನ `ಅಪ್ಪು’ ಸಿನಿಮಾ ರಿಲೀಸ್ ಆಗಿತ್ತು. 2003ರಲ್ಲಿ `ಅಭಿ’ ಸಿನಿಮಾ ರಿಲೀಸ್ ಆಗಿತ್ತು. ಇವರಿಬ್ಬರು ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ರಮ್ಯಾ (Ramya) ಅವರ ವೃತ್ತಿ ಜೀವನದಲ್ಲಿ ರಾಜ್‌ಕುಮಾರ್ ಕುಟುಂಬ ವಿಶೇಷವಾಗಿದೆ. ರಮ್ಯಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಅವರಿಗೆ ರಮ್ಯಾ ಎಂದು ನಾಮಕರಣ ಮಾಡಿದ್ದೂ ಅವರೇ. ಇದನ್ನು ರಮ್ಯಾ ಉಲ್ಲೇಖ ಮಾಡಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಮ್ಯಾ ಅಭಿನಯದ `ಸಂಜು ಮತ್ತು ಗೀತ’ ಸಿನಿಮಾ ಯಶಸ್ಸು ಕಂಡಿತ್ತು. ಶ್ರೀನಗರ ಕಿಟ್ಟಿ ಕೂಡ ವೇದಿಕೆ ಏರಿದ್ದಾರೆ. ಈ ವೇಳೆ `ಐ ಲವ್ ಯೂ ಸಂಜು’ ಎಂದಿದ್ದಾರೆ ರಮ್ಯಾ. ಪುನೀತ್ ಹಾಗೂ ರಮ್ಯಾ ಅವರದ್ದು ಹಿಟ್ ಕಾಂಬಿನೇಷನ್. ಆ ಬಗ್ಗೆಯೂ ರಮ್ಯಾ ಮಾತನಾಡಿದ್ದಾರೆ. ರಮ್ಯಾ ಪುನೀತ್ ನೆನೆದು ಕಣ್ಣೀರು ಹಾಕಿದ್ದಾರೆ.

Comments

Leave a Reply

Your email address will not be published. Required fields are marked *