ಮುಚ್ಚಿದ ದೇಗುಲದ ಮುಂದಿನ ರಸ್ತೆಯಲ್ಲೇ 91 ಜೋಡಿ ವಿವಾಹ!

ಚೆನ್ನೈ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‍ಡೌನ್ ನಡುವೆಯೂ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.

ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್‍ಡೌನ್ ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು. ಆದರೆ ಶುಭ ಮುಹೂರ್ತವಿದ್ದ ಕಾರಣ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್ ಮತ್ತು ಕಾರ್ಯದರ್ಶಿ ರತೀನಾ ಸಭಾಪತಿ ಅವರು ತಿಳಿಸಿದರು. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ. ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ. ದೇಗುಲ ತೆರೆದಿರುವ ಸಾಮಾನ್ಯ ದಿನಗಳಲ್ಲಿ ಮದುವೆಯಾಗುವ ಜೋಡಿಗಳಿಗೆ ಯಾವುದೇ ಮಿತಿ ಇಲ್ಲ. ತಮಿಳುನಾಡಿನಲ್ಲಿ ಹೊಸದಾಗಿ 30,850 ಕೊರೊನಾ ಪ್ರಕರಣ ದೃಢಪಟ್ಟಿವೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

Comments

Leave a Reply

Your email address will not be published. Required fields are marked *