ಭಯೋತ್ಪಾದಕರ ಸಂಹಾರವಾಗುವತನಕ ನಾವು ವಿಶ್ರಮಿಸಲ್ಲ: ತೇಜಸ್ವಿ ಸೂರ್ಯ

ಉಡುಪಿ: ಮಂಗಳೂರು (Mangaluru) ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast)ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದು ಸಂಸದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ಹೇಳಿದ್ದಾರೆ.

ಉಡುಪಿಯಲ್ಲಿ (Udupi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶವಿದ್ದಂತಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು, ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್‍ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದಿದ್ದಾರೆ.

ಭಯೋತ್ಪಾದನೆ ಸದೆಬಡಿಯುವ ತನಕ ನಾವು ವಿಶ್ರಮಿಸಲ್ಲ. ನಮ್ಮ ಸರ್ಕಾರಗಳು ವಿಶ್ರಮಿಸುವುದಿಲ್ಲ. ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಲಿದೆ. ಕರಾವಳಿಯಲ್ಲೇ ಒಂದು ಎನ್‍ಐಎ ಆಫೀಸ್ ಬೇಕಾಗಿದೆ. ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದೆ. ಕರಾವಳಿಯಲ್ಲಿ ಎನ್‍ಐಎ ಕ್ಯಾಂಪ್ ಆಫೀಸ್ ಸ್ಥಾಪನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಕೆಜೆಹಳ್ಳಿ ಡಿಜೆಹಳ್ಳಿ ಪ್ರಕರಣವಾದಾಗಲೇ ಗೃಹ ಸಚಿವ ಅಮಿತ್ ಶಾ (Amit Shah) ಜೊತೆ ಮಾತನಾಡಿದ್ದೆ. ಈಗ ಮತ್ತೆ ಕೇಂದ್ರ ಸರ್ಕಾರ ಜೊತೆ ಮಾತನಾಡುತ್ತೇನೆ. ಪೊಲೀಸ್ ಇಂಟೆಲಿಜನ್ಸ್ ಎನ್‍ಐಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಡೆಗಟ್ಟಬಹುದು. ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯ. ನಾವು ಓಟ್ ಬ್ಯಾಂಕ್‍ಗೆ ಮುಲಾಜು ಬಿದ್ದು ರಾಜಕೀಯ ಮಾಡಲ್ಲ. ರಾಷ್ಟ್ರೀಯ ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ ಎಂದು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *