ಜಾತಿ ಜನಗಣತಿ ವರದಿ ಮಂಡನೆಯಾದ ಬಳಿಕ ಏನಿದೆ ಅಂತಾ ಗೊತ್ತಾಗಲಿದೆ: ಯದುವೀರ್

– ಮುಡಾ ಕೇಸ್ ಸಿಬಿಐಗೆ ವಹಿಸಿ ಅನ್ನೋ ಒತ್ತಾಯ ಮೊದಲಿನಿಂದಲೂ ಇದೆ ಎಂದ ಸಂಸದ

ನವದೆಹಲಿ: ಜಾತಿ ಜನಗಣತಿ ವರದಿ (Caste Census Report) 9 ವರ್ಷಗಳ ಹಿಂದೆಯೇ ತಯಾರಿಸಲಾಗಿದೆ. ಮಂಡನೆಯಾದ ಬಳಿಕ ಏನಿದೆ ಅಂತ ಗೊತ್ತಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ಹೇಳಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಲವು ವಿಚಾರಗಳ ಕುರಿತು ಪ್ರತಿಕ್ರಿಯೆ ನೀಡಿದರು. ಇದನ್ನೂ ಓದಿ: ಇಸ್ರೋ ಸಾಧನೆ – ಡಾಕಿಂಗ್‌ ಪ್ರಕ್ರಿಯೆ ಹೇಗೆ ನಡೆಯಿತು? ಪ್ರಯೋಜನ ಏನು?

ಇನ್ನೂ ಮುಡಾ ಕೇಸ್ ಸಿಬಿಐಗೆ ವಹಿಸಬೇಕು ಅನ್ನೋ ನಮ್ಮ ಒತ್ತಾಯ ಮೊದಲಿನಿಂದಲೂ ಇದೆ. ಇಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿದ್ದೇನೆ. ಮೈಸೂರಿನ ಪ್ರವಾಸೋಧ್ಯಮ ಅಭಿವೃದ್ಧಿ ಕುರಿತಂತೆ ಚರ್ಚೆ ಮಾಡಿದ್ದೇನೆ. ಮೈಸೂರಿನ ಹಳೆ ಡಿಸಿ ಕಚೇರಿಯನ್ನು ಮ್ಯೂಸಿಯಂ ಮಾಡಬೇಕು ಎಂಬ ಒತ್ತಾಯವಿದೆ. ಯೋಗ ಪರಂಪರೆಯನ್ನು ಸಾರಲು, ಸಂರಕ್ಷಣೆ ಮಾಡಲು ಮ್ಯೂಸಿಯಂ ಮಾಡಬೇಕು. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಪ್ರಸ್ತಾಪ ಮಾಡಿದ್ದೇನೆ ಎಂದರು. ಇದನ್ನೂ ಓದಿ: ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ – ಹೆಚ್‌.ಕೆ ಪಾಟೀಲ್

ಅಂಬಾರಿ ಹೊತ್ತಿದ್ದ ಆನೆ ಅರ್ಜುನ ಕಾರ್ಯಾಚರಣೆಯಲ್ಲಿ ತೀರಿಹೋಗಿತ್ತು. ಅರ್ಜುನ ಆನೆಯ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಅರ್ಜುನನ ಪುತ್ಥಳಿ ಸ್ಥಾಪನೆ ಮಾಡಬೇಕು ಎಂಬ ಪ್ರಸ್ತಾಪ ಕೊಟ್ಟಿದ್ದೇವೆ. ಅಂಬಾರಿ ಸಾಗುವ ಮೈಸೂರಿನ ಸರ್ಕಲ್‌ನಲ್ಲಿ ಪುತ್ಥಳಿ ಮಾಡಬೇಕಿದೆ ಎಂದು ತಿಳಿಸಿದರು. ಇದನ್ನೂ ಓದಿ: 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಮಾತ್ರ ಸ್ಥಳೀಯ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ: ಚಂದ್ರಬಾಬು ನಾಯ್ಡು

ಮುಂದುವರಿದು.. ಮೈಸೂರಿನ ಏರ್‌ಪೋರ್ಟ್ ವಿಚಾರವಾಗಿಯೂ ಸಚಿವರೊಂದಿಗೆ ಚರ್ಚಿಸುತ್ತೇನೆ. ಏರ್‌ಪೋರ್ಟ್ ವಿಸ್ತರಣೆಗೆ ಪ್ರಸ್ತಾವನೆ ಇದೆ. ಕೆಲವು ಅಡಚಣೆ ತೆರವುಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಜಂಗಲ್ ರಾಜ್ಯ ಆಗಿದೆ – ಬೀದರ್ ಗುಂಡಿನ ದಾಳಿಗೆ ಬೊಮ್ಮಾಯಿ ದಿಗ್ಭ್ರಮೆ