ನೂರಕ್ಕೆ ನೂರು ಬಹುಮತ ಸಾಬೀತು: ಬಿಎಸ್‍ವೈ ವಿಶ್ವಾಸ

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ನಾಳೆ ನೂರಕ್ಕೆ ನೂರು ಬಹುಮತ ಸಾಬೀತು ಮಾಡುತ್ತೇವೆಂಬ ಸಂಪೂರ್ಣ ವಿಶ್ವಾಸ ನನಗಿದೆ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಳೆ ಸಂಜೆಯೊಳಗೆ ಬಹುಮತ ಸಾಬೀತುಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ಖಡಕ್ ಸೂಚನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‍ವೈ, ಸುಪ್ರೀಂ ಕೋರ್ಟ್ ಆದೇಶವನ್ನು ನಾವೆಲ್ಲಾ ಪಾಲನೆ ಮಾಡಬೇಕು. ಅದಕ್ಕಾಗಿ ಪಕ್ಷದ ಶಾಸಕರೆಲ್ಲರೂ ಅವರವರ ಕ್ಷೇತ್ರಕ್ಕೆ ಹೋಗಿ ಇಂದು ಸಂಜೆಯೊಳಗೆ ಬಿಜೆಪಿ ಕಚೇರಿಗೆ ತಕ್ಷಣ ವಾಪಸ್ ಬರಬೇಕು ಅಂತ ವಿನಂತಿಸಿಕೊಂಡ್ರು.

ಸುಪ್ರೀಂ ಕೋರ್ಟ್ ನ ಆದೇಶದಂತೆ ನಾಳೆ 11 ಗಂಟೆಗೆ ವಿಧಾನ ಮಂಡಲ ಅಧಿವೇಶನವನ್ನು ಕರೆಬೇಕೆಂದುದು ಹೇಳಿ ರಾಜ್ಯಪಾಲರಿಗೆ ಫೈಲ್ ಕಳುಹಿಸುತ್ತಿದ್ದೇನೆ ಅಂತ ಇದೇ ವೇಳೆ ತಿಳಿಸಿದ್ರು.

ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ರೂ, ಜೆಡಿಎಸ್- ಕಾಂಗ್ರೆಸ್ ಮೈತ್ರಿಯಿಂದಾಗಿ ಮುಖ್ಯಮಂತ್ರಿ ಸ್ಥಾನದ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಹಲವೇ ಸೃಷ್ಟಿಯಾಗಿತ್ತು. ಈ ಮಧ್ಯೆ ನಮಗೆ ಬಹುಮತ ಬಂದಿದೆ ಅಂತ ರಾಜ್ಯಪಾಲರ ಒಪ್ಪಿಗೆ ಮೇರೆಗೆ ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಿ ಸಿಎಂ ಸ್ಥಾನವನ್ನು ಅಲಂಕರಿಸಿದ್ರು.

ಈ ಬೆಳವಣಿಗೆಯ ಮೊದಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರೆಸಾರ್ಟ್ ರಾಜಕಾರಣದತ್ತ ಮುಖಮಾಡಿದ್ದು, ಕ್ಷಣ ಕ್ಷಣವೂ ಭಾರೀ ತಿರುವು ಪಡೆದುಕೊಳ್ಳುತ್ತಿತ್ತು. ಅಲ್ಲದೇ ಈ ಎರಡೂ ಪಕ್ಷಗಳು ಜಂಟಿಯಾಗಿ ರಾಜ್ಯಪಾಲರ ನಡೆಸಯನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿಸಲ್ಲಿಸಿದ್ದವು. ಪರಿಣಾಮ ಗುರುವಾರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ವಿಚಾರಣೆ ನಡೆಸಿದ ಕೋರ್ಟ್ ಬಿಎಸ್‍ವೈ ಪ್ರಮಾಣ ವಚನಕ್ಕೆ ತಡೆನೀಡಿರಲಿಲ್ಲ. ಬದಲಾಗಿ ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಪರ ವಕೀಲರು ತಮ್ಮ ತಮ್ಮ ವಾದಗಳನ್ನು ಮಂಡಿಸಿದ್ದಾರೆ. ವಾದಗಳನ್ನು ಆಲಿಸಿದ ಕೋರ್ಟ್ ನ್ಯಾಯಾಧೀಶರು, ನಾಳೆ ಸಂಜೆ 4 ಗಂಟೆ ಸುಮಾರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಬಿಎಸ್‍ವೈಗೆ ಖಡಲ್ ಸೂಚನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *