ಇಸ್ರೇಲ್‌ಗೆ ಪಾಠ ಕಲಿಸದೇ ಬಿಡಲ್ಲ: ಗುಡುಗಿದ ಹಮಾಸ್‌

ಟೆಲ್‌ ಅವೀವ್‌: ಹಮಾಸ್‌ನ (Hamas) ಹಿರಿಯ ಸದಸ್ಯನೊಬ್ಬ ಇಸ್ರೇಲ್‌ (Israel) ಮೇಲಿನ ದಾಳಿಯನ್ನು ಶ್ಲಾಘಿಸಿದ್ದಾನೆ. ಇಸ್ರೇಲ್‌ ಅನ್ನು ನಿರ್ನಾಮ ಮಾಡುವವರೆಗೆ ಭವಿಷ್ಯದಲ್ಲಿ ಅನೇಕ ಬಾರಿ ಇದೇ ರೀತಿಯ ದಾಳಿಗಳನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾನೆ.

ಹಮಾಸ್‌ನ ರಾಜಕೀಯ ಬ್ಯೂರೋದ ಸದಸ್ಯ ಗಾಜಿ ಹಮದ್ ದೃಶ್ಯ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದಾಳಿ ಕುರಿತು ತನ್ನ ನಿಲುವನ್ನು ವ್ಯಕ್ತಪಡಿಸಿದ್ದಾನೆ. ಈತನ ಹೇಳಿಕೆಯನ್ನು ಅನುವಾದಿಸಿ ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್ (MEMRI) ಪ್ರಕಟಿಸಿದೆ. ಇದನ್ನೂ ಓದಿ: ಗಾಜಾದಲ್ಲಿ ಹೋರಾಡುತ್ತಿದ್ದ ಭಾರತೀಯ ಮೂಲದ ಇಸ್ರೇಲಿ ಯೋಧ ಸಾವು

ನಮ್ಮ ನೆಲದಲ್ಲಿ ಸ್ಥಾನವಿಲ್ಲದ ದೇಶ ಇಸ್ರೇಲ್. ನಾವು ಅದನ್ನು ತೆಗೆದುಹಾಕಬೇಕು. ಏಕೆಂದರೆ ಇದು ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳಿಗೆ ಭದ್ರತೆ, ಮಿಲಿಟರಿ ಮತ್ತು ರಾಜಕೀಯ ದುರಂತಗಳಿಗೆ ಕಾರಣವಾಗಬಹುದು. ಇದನ್ನು ಹೇಳಲು ನಮಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ಇಸ್ರೇಲ್‌ ಬಗೆಗಿನ ನಿಲುವನ್ನು ವ್ಯಕ್ತಪಡಿಸಿದ್ದಾರೆ.

ನಿಮ್ಮ ಹೇಳಿಕೆ ಇಸ್ರೇಲ್‌ನ ಸಂಪೂರ್ಣ ವಿನಾಶವನ್ನು ಅರ್ಥೈಸುತ್ತದೆಯೇ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಖಂಡಿತ ಹೌದು. ನಾವು ಇಸ್ರೇಲ್‌ಗೆ ಪಾಠ ಕಲಿಸಬೇಕು. ಇದು ಇಲ್ಲಿಗೆ ನಿಲ್ಲುವುದಿಲ್ಲ ಎಂದು ಹಮಾಸ್‌ ಸದಸ್ಯ ತಮ್ಮ ನಿಲುವಿನ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ನಿಯಂತ್ರಣವಿಲ್ಲದ ಏಕೈಕ ಕ್ರಾಸಿಂಗ್‌ ದಾಟಿ ಈಜಿಪ್ಟ್‌ಗೆ ಹೊರಟ ವಿದೇಶಿಯರು

ನಾವು ಬೆಲೆ ತೆರಲು ಸಿದ್ಧರಿದ್ದೇವೆ. ಅಷ್ಟೇ ಅಲ್ಲ ಅದನ್ನು ವಾಪಸ್‌ ಪಡೆಯುತ್ತೇವೆ. ನಮ್ಮನ್ನು ಹುತಾತ್ಮರ ರಾಷ್ಟ್ರದವರು ಎಂದು ಕರೆಯಲಾಗುತ್ತದೆ. ತ್ಯಾಗ ಮಾಡಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]