ಬೆಂಗಳೂರಿನಲ್ಲಿ 7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ ಮುಚ್ಚಿದ್ದೇವೆ, ವಿಪಕ್ಷಗಳು ರಾಜಕೀಯ ಮಾಡ್ತಿದೆ: ಡಿಕೆಶಿ

ಬೆಂಗಳೂರು: ಹೆಚ್ಚು ಮಳೆ ಹಾಗೂ ಟ್ರಾಫಿಕ್‌ನಿಂದ ರಸ್ತೆ ಗುಂಡಿ ಆಗುತ್ತದೆ. 7 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿ ಮುಚ್ಚಿದ್ದೇವೆ. ಇನ್ನೂ ಐದು ಸಾವಿರ ರಸ್ತೆ ಗುಂಡಿ ಬಾಕಿ ಇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಬೆಂಗಳೂರು ರಸ್ತೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುತ್ತದೆ. ಆದರೆ ವಿಪಕ್ಷಗಳು ರಾಜಕೀಯ ಮಾಡುತ್ತಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ಈಗಾಗಲೇ ಗುಂಡಿಗಳ ಪತ್ತೆ ಹಚ್ಚಲು ಸೂಚನೆ ನೀಡಲಾಗಿದೆ. ಜನರು ಕೂಡಾ ಗುಂಡಿ ಬಗ್ಗೆ ಮಾಹಿತಿ ಕೊಡಲು ಸೂಚನೆ ನೀಡಲಾಗಿದೆ. ಆದಷ್ಟೂ ಬೇಗ ಗುಂಡಿ ಮುಚ್ಚೋ ಕೆಲಸ ಆಗುತ್ತದೆ ಎಂದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಯೋಧ ಹುತಾತ್ಮ, ನಾಲ್ವರು ಶಂಕಿತ ಉಗ್ರರು ವಶಕ್ಕೆ 

ನಾವು ಸಮಸ್ಯೆಗಳನ್ನು ಬಗೆಹರಿಸಲು ಇದ್ದೇವೆ. ಬಿಜೆಪಿಯವರು (BJP) ರಾಜಕೀಯ ಮಾಡಲು ಇದ್ದಾರೆ. ಸಿಎಂ ಕೂಡ ರಸ್ತೆ ಗುಂಡಿ (Road Pothole) ಮುಚ್ಚಲು ಸೂಚಿಸಿದ್ದಾರೆ. ಯಾವುದೇ ಗುಂಡಿಗಳು ಇರಬಾರದು. ಯಾರೂ ಕೂಡ ರಸ್ತೆ ಗುಂಡಿಯನ್ನು ಮಾಡೋದಿಲ್ಲ, ಬಯಸೋದೂ ಇಲ್ಲ. ಪೊಲೀಸರಿಗೂ ಹಾಗೂ ಸಾರ್ವಜನಿಕರಿಗೂ ರಸ್ತೆ ಗುಂಡಿ ಬಗ್ಗೆ ಮಾಹಿತಿ ಕೊಡಲು ತಿಳಿಸಿದ್ದೇವೆ. ರಾಜಕೀಯ ಮಾಡುವವರು ರಾಜಕೀಯ ಮಾಡಲಿ, ನಾವು ಏನೂ ಹೇಳಲು ಆಗಲ್ಲ. ನಮ್ಮ ಬಳಿ ಪರಿಹಾರ ಇದೆ. ನಾವೂ ಬಿಜೆಪಿ ಶಾಸಕರ ಕ್ಷೇತ್ರಕ್ಕೂ ತಾರತಮ್ಯ ಮಾಡದೇ ಅನುದಾನ ಕೊಟ್ಟಿದ್ದೇವೆ. ಈಗಲೂ ಕೂಡ 25 ಕೋಟಿ ಅನುದಾನ ಕೊಟ್ಟಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ರಿಶ್ಚಿಯನ್ ಕುರುಬ ಅಂತ ನಾವು ಬರೆಸಿಲ್ಲ, ಜನರೇ ಬರೆಸಿದ್ದಾರೆ: ಶಿವರಾಜ ತಂಗಡಗಿ