ಇತಿಹಾಸದಲ್ಲೇ ಮೊದಲ ಬಾರಿಗೆ ಶಬರಿಮಲೆಗೆ ಮಹಿಳಾ ಪೊಲೀಸರು ಎಂಟ್ರಿ!

ತಿರುವನಂತಪುರಂ: ಶಬರಿಮಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಪೊಲೀಸರು ದೇವಾಲಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದೇವಾಲಯವು ಇಂದು ಸಂಜೆ ತೆರೆದಿದ್ದು ಭದ್ರತಾ ದೃಷ್ಟಿಯಿಂದ ಸುಮಾರು 15 ಮಹಿಳಾ ಪೊಲೀಸ್ ಪೇದೆಯನ್ನು ಶಬರಿಮಲೆ ದೇವಾಲಯದಲ್ಲಿ ನಿಯೋಜಿಸಲಾಗಿದೆ.

ನೇಮಕಗೊಂಡಿರುವ ಎಲ್ಲಾ ಮಹಿಳಾ ಪೊಲೀಸರು 50 ವರ್ಷ ಮೇಲ್ಪಟ್ಟವರಾಗಿದ್ದು, ದೇವಾಲಯವನ್ನು ಪ್ರವೇಶಿಸಿದ ನಂತರ ಮಹಿಳಾ ಪೊಲೀಸರು ಅಯ್ಯಪ್ಪ ಸ್ವಾಮಿ ದೇವರಿಗೆ ನಮಸ್ಕರಿಸಿ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ. ನೇಮಕಗೊಂಡವರ ಪೈಕಿ ಒಬ್ಬರು ತಮ್ಮ ಬಾಲ್ಯದಲ್ಲಿ ಪೋಷಕರ ಜೊತೆ ದೇವಾಲಯಕ್ಕೆ ಬಂದಿದ್ದರು.

ಮಹಿಳಾ ಪೇದೆಯೊಬ್ಬರು ಪ್ರತಿಕ್ರಿಯಿಸಿ,”ನಾವು ಇಲ್ಲಿ ನಮ್ಮ ಕಾರ್ಯ ನಿರ್ವಹಿಸಲು ಬಂದಿದ್ದೇವೆ. ನಿಷೇಧಿತ ವಯೋಮಾನದ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸಿದಾಗ ಅವರನ್ನು ತಡೆಯುವವರ ಮೇಲೆ ಕ್ರಮ ಕೈಗೊಂಡು ಮಹಿಳೆಯರಿಗೆ ಸಹಕರಿಸುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

ಇಂದು ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಮುಚ್ಚಲಿದೆ. ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿ ವಿಶೇಷ ಪೂಜೆಯ ವಿಡಿಯೋವನ್ನು ಚಿತ್ರಿಸಬಾರದು ಹಾಗೂ ಮಾಧ್ಯಮದವರಿಗೆ ಮಾಹಿತಿ ನೀಡಬಾರದು ಎನ್ನುವ ಕಾರಣಕ್ಕೆ ಮೊಬೈಲ್ ಜಾಮರ್‍ಗಳನ್ನು ದೇವಾಲಯದಲ್ಲಿ ಅಳವಡಿಸಲಾಗಿದೆ. ಮುಂಜಾಗ್ರತೆಯ ಕ್ರಮವಾಗಿ 2,300 ಪೊಲೀಸರನ್ನು ನಿಯೋಜಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *