ಹಬ್ಬಕ್ಕೆ 3 ಸಾವಿರ ಪರಿಸರ ಸ್ನೇಹಿ ಗಣೇಶ ಮೂರ್ತಿ ಹಂಚಿಕೆ: ಸೌಮ್ಯಾ ರೆಡ್ಡಿ

ಬೆಂಗಳೂರು: ಮಣ್ಣಿನ ಗಣೇಶನನ್ನು ಹಬ್ಬಕ್ಕೆ ಕೂರಿಸುವಂತೆ ಜಯನಗರ ಶಾಸಕಿ ಸೌಮ್ಯರೆಡ್ಡಿ ಮತ್ತು ಬೆಂಬಲಿಗರು ಜೆಪಿ ನಗರದಲ್ಲಿ ರ‍್ಯಾಲಿ ನಡೆಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಸಿದ ಅವರು, ಬಣ್ಣ ಬಳಿದ ಹಾಗೂ ಪಿಒಪಿ ಗಣೇಶನ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತವೆ. ಹೀಗಾಗಿ ಕಳೆದ ವರ್ಷವೇ ಪಿಒಪಿ ಗಣೇಶನ ಮೂರ್ತಿಗಳನ್ನು ರದ್ದುಮಾಡಲಾಗಿದೆ. ನಗರದ ಬಹುತೇಕ ಕೆರೆಗಳು ಮಾಲಿನ್ಯದಿಂದಲೇ ಪ್ರಖ್ಯಾತಿ ಪಡೆದುಕೊಂಡಿವೆ. ಅಲ್ಲದೇ ಗಣೇಶ ಹಬ್ಬದ ಬಳಿಕ ಕೆರೆಗಳ ಮಾಲಿನ್ಯ ಹೆಚ್ಚಾಗುತ್ತವೆ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಜನರಲ್ಲಿ ಪರಿಸರ ಸ್ನೇಹಿ ಹಾಗೂ ಬಣ್ಣ ರಹಿತ ಗಣೇಶನ ಮೂರ್ತಿಗಳನ್ನು ಬಳಸುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಹಬ್ಬದ 10 ಹಾಗೂ 11ನೇ ತಾರೀಖಿನಂದು ಮೂರು ಸಾವಿರ ಮಣ್ಣಿನ ಗಣೇಶನ ಮೂರ್ತಿಗಳನ್ನು ಭಕ್ತಾದಿಗಳಿಗೆ ಹಂಚಲಾಗುತ್ತದೆ. ಈಗಾಗಲೇ ಬಿಟಿಎಂ ಹಾಗೂ ಜಯನಗರದಲ್ಲಿ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ರ‍್ಯಾಲಿಯಲ್ಲಿ ಶಾಸಕಿ ಸೌಮ್ಯಾರೆಡ್ಡಿಯವರಿಗೆ ಬೈರಸಂದ್ರದ ಕಾರ್ಪೋರೇಟರರ್ ನಾಗರಾಜ್ ಹಾಗೂ ಶಾಲಾ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *