ಕಾಂಗ್ರೆಸ್‍ನವರನ್ನು ನಾವು ನಿದ್ದೆ ಮಾಡೋಕೆ ಬಿಡಲ್ಲ: ಶ್ರೀರಾಮಲು

ಬಳ್ಳಾರಿ: ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್ ಜೆಡಿಎಸ್ ಅಂದುಕೊಂಡಿರಬಹುದು. ಆದರೆ ಕಾಂಗ್ರೆಸ್‍ನವರನ್ನು ನಾವೂ ನಿದ್ದೆ ಮಾಡೋಕೆ ಬಿಡೋದಿಲ್ಲ, ಕಾಂಗ್ರೆಸ್ ಅಕ್ರಮ ಅವ್ಯವಹಾರಗಳನ್ನು ಜನರ ಮುಂದಿಡುತ್ತೇವೆ. ಕಾಂಗ್ರೆಸ್ ನವರನ್ನು ದಿನದ 24 ಗಂಟೆ ಕಾಲ ಕಾಯುತ್ತೇವೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿಂದು ಮಾತನಾಡಿದ ಶ್ರೀರಾಮುಲು, ಬಿಜೆಪಿಗೆ 104 ಸ್ಥಾನ ಸಿಕ್ಕಿದ್ದರೂ ಸದನದಲ್ಲಿ ಬಹುಮತ ಸಾಬೀತು ಪಡಿಸುವಲ್ಲಿ ನಾವು ಸೋತಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನಾವೆಲ್ಲಾ ಜೈಲಿಗೆ ಹೋಗುತ್ತೇವೆ ಎಂಬ ಕಾರಣಕ್ಕೆ ಕಾಂಗ್ರೆಸ್ಸಿನವರು ಜೆಡಿಎಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ನಾವು ಕಾಂಗ್ರೆಸ್‍ನವರನ್ನು ಮಲಗೋಕೆ ಬಿಡಲ್ಲ. ಲೋಕಾಯುಕ್ತ ಹಲ್ಲು ಮುರಿದಿದ್ದು, ಅಕ್ರಮಗಳನ್ನು ಎತ್ತಿ ಹಿಡಿಯುತ್ತೇವೆ. ದಿನದ 24 ತಾಸು ಅವರನ್ನು ಕಾಯುತ್ತೇವೆ. ಈಗಾಗಲೇ ಮಂತ್ರಿಗಿರಿಗಾಗಿ ಒಳ ಜಗಳ ಅವರಲ್ಲಿ ಪ್ರಾರಂಭವಾಗಿದೆ ಎಂದರು.

ಎಚ್‍ಡಿ ಕುಮಾರಸ್ವಾಮಿ ಅವರನ್ನು ಬೇಷರತ್ ಆಗಿ ಸಿಎಂ ಮಾಡಲು ಒಪ್ಪಿದ್ದಾರೆ. ಅವರ ಭ್ರಷ್ಟಾಚಾರ ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ. ಅವರ ಅನಾಚಾರ, ಭ್ರಷ್ಟಾಚಾರ ಜನರ ಮುಂದೆ ಇಡುತ್ತೇವೆ. ದಿನದ 24 ತಾಸು ನಾವು ಅವರನ್ನು ನಿದ್ದೆ ಮಾಡದ ಹಾಗೇ ಕಾಯುತ್ತೇವೆ ಎಂದು ಬಿ ಶ್ರೀರಾಮುಲು ಹೇಳಿದರು.

Comments

Leave a Reply

Your email address will not be published. Required fields are marked *