ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಸರಬರಾಜು ಮಾಡುವ ಇಂದಿರಾ ಕ್ಯಾಂಟೀನ್ ಊಟವನ್ನು ಜನಪ್ರತಿನಿಧಿಗಳಿಗೆ ನೀಡುವುದಿಲ್ಲ ಎಂದು ಮೇ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಜನಸಾಮಾನ್ಯರಿಗೆ ನೀಡುವ ಊಟವನ್ನು ಬಿಬಿಎಂಪಿ ಕೌನ್ಸಿಲ್ ಸಭೆಗೂ ಸರಬರಾಜು ಮಾಡಲು ಕಳೆದ ಅವಧಿಯ ಮೇಯರ್ ಗಂಗಾಂಬಿಕೆ ಮೆ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಆದೇಶ ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಸಂಸ್ಥೆ, ಏಕಾಏಕಿ ಇನ್ನುಮುಂದೆ ಕೌನ್ಸಿಲ್ ಸಭೆಗೆ ಊಟ ಸರಬರಾಜು ಮಾಡುವುದಿಲ್ಲ ಎಂದು ತಿಳಿಸಿದೆ.

ಬಿಬಿಎಂಪಿ ಮಾಸಿಕ ಕೌನ್ಸಿಲ್ ಸಭೆಗೆ ರಿವಾರ್ಡ್ಸ್ ಸಂಸ್ಥೆ ಊಟದ ಸರಬರಾಜು ಮಾಡುತಿತ್ತು. ಆಗ ಸಾಧ್ಯವಿಲ್ಲ ಎಂದು ಪತ್ರದ ಮೂಲಕ ಮನವಿ ಮಾಡಿದೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷ ಆಡಳಿತದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ 2018 ಅಕ್ಟೋಬರ್ ನಿಂದ ಕ್ಯಾಂಟೀನ್ ಆಹಾರವನ್ನು ಕೌನ್ಸಿಲ್ ಸಭೆಗೆ ತರಿಸುವ ಮೂಲಕ ಎಲ್ಲ ಸದಸ್ಯರು ಕ್ಯಾಂಟೀನ್ ಆಹಾರ ಸೇವಿಸುವಂತೆ ಮಾಡಿದ್ದರು.

ಪಾಲಿಕೆಯ ಎಲ್ಲ ಕೌನ್ಸಿಲ್ ಸಭೆಗಳು, ಇತರೆ ಸಣ್ಣ ಪುಟ್ಟ ಸಭೆಗಳಿಗೆ ಇಂದಿರಾ ಕ್ಯಾಂಟೀನ್‍ನಿಂದ ಉಪಾಹಾರ, ಸಸ್ಯಾಹಾರ ಊಟ, ಗೋಡಂಬಿ, ಚಹಾ, ಕಾಫಿ, ಬಾದಾಮಿ ಹಾಲು ಹಾಗೂ ಬಿಸ್ಕತ್ ಸರಬರಾಜು ಆಗುತಿತ್ತು. ವಾರ್ಷಿಕ 16 ರಿಂದ 17 ಲಕ್ಷ ರೂ. ಇಂದಿರಾ ಕ್ಯಾಂಟೀನ್‍ಗೆ ಹಣ ಸಂದಾಯವಾಗುತ್ತಿತ್ತು. ಆದರೆ ಖಾಸಗಿ ಹೊಟೇಲ್‍ಗಳಿಂದ ತರಿಸಿದ ಊಟದಲ್ಲಿ ಉಪಾಹಾರವು ಟೀ, ಕಾಫಿ, ಬಾದಾಮಿ ಹಾಲು, ಗೋಡಂಬಿ, ಮದ್ದೂರು ವಡೆ, ಸಸ್ಯಾಹಾರ ಊಟ ಹಾಗೂ ಮಾಂಸಾಹಾರಿ ಊಟ ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ವಾರ್ಷಿಕ 75 ರಿಂದ 80 ಲಕ್ಷ ರೂ. ಆಹಾರಕ್ಕಾಗಿ ಖರ್ಚಾಗುತ್ತಿತ್ತು. ಇದರಿಂದ ಒಟ್ಟು 20 ಲಕ್ಷ ರೂ. ಉಳಿತಾಯವಾಗುತಿತ್ತು.

Leave a Reply