ಬಾಬರ್ ಏನು ಮಾಡಿದ್ದ ನಂತರ ಏನಾಯಿತು ಎನ್ನುವುದನ್ನು ನಾವು ಪರಿಗಣಿಸಲ್ಲ: ಸುಪ್ರೀಂ

ನವದೆಹಲಿ: ಸಂಧಾನದ ಮೂಲಕ ಅಯೋಧ್ಯೆಯ ರಾಮಜನ್ಮಭೂಮಿ ಪ್ರಕರಣವನ್ನು ಇತ್ಯರ್ಥ ಮಾಡಬೇಕೆಂದು ಸಲ್ಲಿಕೆಯಾದ ಅರ್ಜಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಆಯೋಧ್ಯೆ ಭೂಮಾಲೀಕತ್ವ ದಾವೆ ವಿಚಾರಣೆ ಇಂದು ಮುಖ್ಯ. ನ್ಯಾ. ರಂಜನ್ ಗೊಗೋಯ್, ನ್ಯಾಯಾಧೀಶರಾದ ಎಸ್‍ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್, ಅಬ್ದುಲ್ ನಜೀರ್ ಅವರಿದ್ದ ಪೀಠದಲ್ಲಿ ನಡೆಯಿತು.

ಹಿಂದೂ ಸಂಘಟನೆಯ ಪರ ವಕೀಲರು ಸಂಧಾನಕ್ಕೆ ಸಿದ್ಧವಿಲ್ಲ ಎಂದು ಹೇಳಿದರೆ, ಮುಸ್ಲಿಂ ಮತ್ತು ನಿರ್ಮೋಹಿ ಅಖಾಡ ಸಂಧಾನಕ್ಕೆ ಒಪ್ಪಿಗೆ ಸೂಚಿಸಿದೆ.

ಅರ್ಜಿ ವಿಚಾರಣೆ ವೇಳೆ ಬಾಬರ್ ಏನು ಮಾಡಿದ್ದ ನಂತರ ಏನಾಯಿತು ಎನ್ನುವುದನ್ನು ಪರಿಗಣಿಸದೇ ಈಗ ಅಲ್ಲಿ ಏನಿದೆ ಎನ್ನುವುದನ್ನು ಮಾತ್ರ ಪರಿಗಣಿಸುತ್ತೇವೆ ಎಂದು ನ್ಯಾ.ಬೊಬ್ಡೆ ಅಭಿಪ್ರಾಯಪಟ್ಟರು. ಇದು ಕೇವಲ ಆಸ್ತಿಯ ವಿಚಾರವಲ್ಲ. ಇದೊಂದು ಅತ್ಯಂತ ಸೂಕ್ಷ್ಮ ಮತ್ತು ನಂಬಿಕೆಯ ವಿಚಾರವಾಗಿದೆ ಎಂದು ಪೀಠ ಹೇಳಿತು.

ಈ ವೇಳೆ ಪೀಠ ತನ್ನ ಕಕ್ಷಿದಾರರಿಗೆ ಭಾಷಾಂತರಗೊಂಡಿರುವ ದಾಖಲೆಗಳನ್ನು ಪರಿಶೀಲಿಸುವಂತೆ ಆದೇಶಿಸಿದೆ. ಅಷ್ಟೇ ಅಲ್ಲದೇ ಈ ದಾಖಲೆಗಳಲ್ಲಿ ಆಕ್ಷೇಪಗಳಿದ್ದರೆ 6 ವಾರದ ಒಳಗಡೆ ಗಮನಕ್ಕೆ ತರುವಂತೆ ಸೂಚಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *