Wayanad LandSlides | ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ರಾಹುಲ್‌

ನವದೆಹಲಿ: ವಯನಾಡು ಭೂ ಕುಸಿತ ಸಂತ್ರಸ್ತರಿಗೆ ಕರ್ನಾಟಕ (Karnataka) ಸರ್ಕಾರದ ವತಿಯಿಂದ 100 ಮನೆ ನಿರ್ಮಿಸಲಾಗುವುದು ಎಂದು ಘೋಷಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನಿರ್ಧಾರಕ್ಕೆ ರಾಹುಲ್‌ ಗಾಂಧಿ (Rahul Gandhi) ಕೃತಜತ್ಞತೆ ಹೇಳಿದ್ದಾರೆ.

ಈ ಎಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ರಾಹುಲ್‌ ಗಾಂಧಿ, ವಯನಾಡ್‌ನಲ್ಲಿನ ಈ ಕಷ್ಟದ ಸಮಯದಲ್ಲಿ ಉದಾರವಾದ ಬೆಂಬಲಕ್ಕಾಗಿ ನಾನು ಕರ್ನಾಟಕ ಜನರಿಗೆ ಮತ್ತು ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ. ದುರಂತ ಭೂಕುಸಿತದ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸುವ ನಿಮ್ಮ ಬದ್ಧತೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಪ್ರಸ್ತುತ ಭಾರತೀಯರ ಸಹಾನುಭೂತಿ ಮತ್ತು ಒಗ್ಗಟ್ಟು ವಯನಾಡ್‌ಗೆ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಮಯ್ಯ ಹೇಳಿದ್ದೇನು?
ವಯನಾಡಿನಲ್ಲಿ ಸಂಭವಿಸಿದ ದುರಂತ ಭೂಕುಸಿತದ ಬೆಳಕಿನಲ್ಲಿ, ಕರ್ನಾಟಕವು ಕೇರಳದೊಂದಿಗೆ (Kerala) ಒಗ್ಗಟ್ಟಿನಿಂದ ನಿಂತಿದೆ. ನಾನು ಕೇರಳ ಸಿಎಂ ಪಿಣರಾಯಿ ವಿಜಯನ್‌ ಜೊತೆ ಮಾತನಾಡಿ ಬೆಂಬಲ ವ್ಯಕ್ತಪಡಿಸಿದ್ದೇನೆ. ಕರ್ನಾಟಕವು ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ. ಒಟ್ಟಾಗಿ ನಾವು ಪುನರ್‌ ನಿರ್ಮಾಣ ಮಾಡುತ್ತೇವೆ ಮತ್ತು ಭರವಸೆಯನ್ನು ಪುನಃಸ್ಥಾಪಿಸುತ್ತೇವೆ ಎಂದು ಹೇಳಿದ್ದಾರೆ.