ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ಕೊನೆಗೂ ಬೆಂಗಳೂರಲ್ಲಿ ವಾಟರ್‌ ಟ್ಯಾಂಕರ್‌ಗೆ ದರ ಫಿಕ್ಸ್‌ – ಎಷ್ಟು ಕಿ.ಮೀಗೆ ಎಷ್ಟು ದರ?

ಸಾಂದರ್ಭಿಕ ಚಿತ್ರ

ಬೆಂಗಳೂರು: ಪಬ್ಲಿಕ್ ಟಿವಿ (PUBLiC TV)   ವಾಟರ್ ಟ್ಯಾಂಕರ್ ಮಾಫಿಯಾದ  (Tanker Mafia)ಬಗ್ಗೆ ಸತತ ವರದಿ ಬಿತ್ತರಿಸಿದ ಬೆನ್ನಲ್ಲೇ ಬೆಂಗಳೂರು (Bengaluru) ಜಿಲ್ಲಾಡಳಿತ ನೀರಿನ ಟ್ಯಾಂಕರ್‌ಗೆ (Water Tanker) ದರವನ್ನು ನಿಗದಿ ಮಾಡಿದೆ.

ಸಭೆ ನಡೆಸಿದ ಬಳಿಕ ತಾಂತ್ರಿಕ ವರದಿಯ ಅನ್ವಯ ಜಿಲ್ಲಾಡಳಿತ ಎರಡು ಸ್ಲಾಬ್‌ಗಳಲ್ಲಿ ದರ ನಿಗದಿ ಮಾಡಿದೆ. ತಿಂಗಳ ಬಾಡಿಗೆ ಒಪ್ಪಿಕೊಳ್ಳುವವರಿಗೆ 5 ಕಿಮೀಗೆ 510 ರೂ., 10 ಕಿ.ಮೀ ಹೋದರೆ 650 ರೂ. ದರವನ್ನು ನಿಗದಿ ಮಾಡಲಾಗಿದೆ.

 

ಎಷ್ಟು ದರ?
5 ಕಿ.ಮೀಟರ್ ಒಳಗಡೆ ಸಂಚರಿಸವ ಟ್ಯಾಂಕರ್‌
6 ಸಾವಿರ ಲೀಟರ್ – 600 ರೂ.
8 ಸಾವಿರ ಲೀಟರ್‌ – 700 ರೂ.
12 ಸಾವಿರ ಲೀಟರ್‌ – 1000 ರೂ.

5 ರಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸುವ ಟ್ಯಾಂಕರ್‌
6 ಸಾವಿರ ಲೀಟರ್ – 750 ರೂ.
8 ಸಾವಿರ ಲೀಟರ್‌ – 850 ರೂ.
12 ಸಾವಿರ ಲೀಟರ್‌ – 1200 ರೂ.