ಕೆಆರ್‍ಎಸ್‍ನಿಂದ ಇದಕ್ಕಿದ್ದಂತೆ ನೀರು ಬಿಟ್ರು- ನಡುನೀರಲ್ಲಿ ಸಿಲುಕಿದ್ದ 10 ಪ್ರವಾಸಿಗರನ್ನ ಕಾಪಾಡಿದ ಸ್ಥಳೀಯರು

ಚಾಮರಾಜನಗರ: ಕೆಆರ್‍ಎಸ್ ನಿಂದ ತಮಿಳುನಾಡಿಗೆ ದಿಢೀರನೆ ನೀರು ಹರಿಸಿರುವ ಹಿನ್ನೆಲೆಯಲ್ಲಿ 10 ಮಂದಿ ಪ್ರವಾಸಿಗರು ಸಿಲುಕಿ ಕೊನೆಗೂ ಪ್ರಾಣಾಪಾಯಾದಿಂದ ಪಾರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಸತ್ತೆಗಾಲದಲ್ಲಿ ನಡೆದಿದೆ.

ಸತ್ತೆಗಾಲದ ಬಳಿ ಕಾವೇರಿ ನದಿಯಲ್ಲಿ ಪ್ರವಾಸಿಗರು ಆಟ ಆಡುತ್ತಿದ್ದ ವೇಳೆ ಈ ಘಟನೆ ಜರುಗಿದೆ. ಪ್ರವಾಸಿಗರು ನೀರಿಗಿಳಿಯುವ ವೇಳೆ ನೀರಿನ ಪ್ರಮಾಣ ಕಡಿಮೆಯಿತ್ತು. ಹೀಗಾಗಿ ಅವರು ನೀರಿನಲ್ಲಿ ಆಟವಾಡುತ್ತಿದ್ದರು. ಇದೇ ವೇಳೆ ದೀಢರನೇ ನೀರಿನ ಪ್ರಮಾಣ ಹೆಚ್ಚಾಗಿದೆ. ನೀರಿನ ರಭಸ ನೋಡಿ ಪ್ರವಾಸಿಗರು ಬಂಡೆಯ ಮೇಲೆ ಹತ್ತಿದ್ದಾರೆ.

ನೀರು ರಭಸದಿಂದ ಬರುತ್ತಿರುವುದನ್ನ ಕಂಡ ಪ್ರವಾಸಿಗರು ಗಾಬರಿಗೊಂಡು ಕಿರುಚಿದ್ದಾರೆ. ಇದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಬಂದು ಉದ್ದವಾದ ಏಣಿಯನ್ನು ಸೇತುವೆ ರೀತಿಯಲ್ಲಿ ಮಾಡಿ ಒಂದು ಬಂಡೆಯಿಂದ ಇನ್ನೊಂದು ಬಂಡೆಗೆ ದಾಟಿಸುವ ಮೂಲಕ ಹರಸಹಾಸಪಟ್ಟು ಪ್ರವಾಸಿಗರನ್ನ ಕಾಪಾಡಿದ್ದಾರೆ.

ಕೆಆರ್‍ಎಸ್ ನಿಂದ ಮುನ್ನೆಚ್ಚರಿಕೆ ಕ್ರಮ ಇಲ್ಲದೇ ತಮಿಳುನಾಡಿಗೆ ನೀರು ಹರಿಸಿದ್ದೆ ಈ ಘಟನೆಗೆ ಕಾರಣವಾಗಿದೆ. ಆದರೂ ಕೂದಲೆಳೆ ಅಂತರದಲ್ಲಿ 10 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದೀಗ ಮುನ್ನೆಚ್ಚರಿಕೆ ಕ್ರಮ ಇಲ್ಲದೆ ನೀರು ಹರಿಸಿರುವ ಅಧಿಕಾರಿಗಳ ವಿರುದ್ಧ ನದಿ ಪಾತ್ರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://www.youtube.com/watch?v=906YhsN2yDM

Comments

Leave a Reply

Your email address will not be published. Required fields are marked *