ಬೇಬಿ ಜೀವಾಳ ಜೊತೆ ರಿಷಬ್ ಪಂತ್- ಕ್ಯೂಟ್ ವಿಡಿಯೋ ನೋಡಿ

ನವದೆಹಲಿ: ಭಾನುವಾರ ಇಂಗ್ಲೆಂಡ್‍ನ ಓಲ್ಡ್ ಟ್ರಾಫರ್ಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಭಾತರ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತ್ತು. ಈ ಪಂದ್ಯದ ವೇಳೆ ಎಂ.ಎಸ್ ಧೋನಿ ಅವರ ಪುತ್ರಿ ಜೀವಾ ಮತ್ತು ಭಾತರದ ಆಟಗಾರ ರಿಷಬ್ ಪಂತ್ ಅವರ ಕ್ಯೂಟ್ ವಿಡಿಯೋ ಒಂದು ವೈರಲ್ ಆಗಿದೆ.

ಪಂದ್ಯದ ಆರಂಭಕ್ಕೂ ಮುನ್ನಾ ಜೀವಾ ಧೋನಿ ಹಾಗೂ ರಿಷಬ್ ಪಂತ್ ಸೇರಿಕೊಂಡು ಮಸ್ತಿ ಮಾಡುತ್ತಿರುವ ವಿಡಿಯೋವನ್ನು ರಿಷಬ್ ಪಂತ್ ಅವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದು, ಅಭಿಮಾನಿಗಳು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. ರಿಷಬ್ ಮತ್ತು ಜೀವಾ ಕಿರುಚುತ್ತಿರುವ ವಿಡಿಯೋ ಹಾಕಿರುವ ಪಂತ್ ಕ್ರೈಮ್ ಪಾಟ್ನನರ್ ಎಂದು ಬರೆದುಕೊಂಡಿದ್ದಾರೆ.

https://www.instagram.com/p/Byx_NZDnu9A/?utm_source=ig_embed&utm_campaign=embed_video_watch_again

ಭಾರತ ತಂಡದ ಆರಂಭಿಕ ಶಿಖರ್ ಧವನ್ ಅವರು ಗಾಯದ ಸಮಸ್ಯೆಗೆ ತುತ್ತಾದ ಕಾರಣ ರಿಷಬ್ ಪಂತ್ ಅವರನ್ನು ಬದಲಿ ಆಟಗಾರನಾಗಿ ಜೂನ್ 14 ಕ್ಕೆ ಇಂಗ್ಲೆಂಡ್‍ಗೆ ಕರಸಿಕೊಳ್ಳಲಾಗಿದೆ. ಇನ್ನೂ ಅವರು ಭಾರತ ತಂಡದಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿಲ್ಲ. ಆದರೆ ಭಾನುವಾರದ ಪಂದ್ಯದಲ್ಲಿ ತಮ್ಮ ತಂಡದ ಆಟಗಾರರಿಗೆ ಡ್ರಿಂಕ್ಸ್ ಸಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ.

ಪಂತ್ ಮಕ್ಕಳ ಜೊತೆ ಆಟವಾಡ್ತಿರೋದು ಇದೇ ಮೊದಲಲ್ಲ. ಈ ಹಿಂದೆ ಪಂತ್ ಬೇಬಿ ಸಿಟ್ಟರ್ ಆಗಿದ್ದರು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಭರ್ಜರಿ ಆಟವಾಡಿದ್ದ ರಿಷಬ್ ಪಂತ್, ಬೇಬಿ ಸಿಟ್ಟರ್ ಎಂಬ ಹೆಸರು ಪಡೆದಿದ್ದರು.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಕ್ಯಾಪ್ಟನ್ ಟಿಮ್ ಪೈನ್, ಪಂತ್ ರನ್ನು ಬೇಬಿ ಸಿಟ್ಟರ್ ಎಂದು ಕರೆದಿದ್ದರು. ಮನೆಗೆ ಬಂದು ಮಕ್ಕಳನ್ನು ನೋಡಿಕೋ, ನಾನು ನನ್ನ ಪತ್ನಿ ಸಿನಿಮಾಕ್ಕೆ ಹೋಗ್ತೇವೆ ಎಂದಿದ್ದರು. ಮೆಲ್ಬೋರ್ನ್ ಪಂದ್ಯ ಮುಗಿದ ಬಳಿಕ ಟಿಮ್ ಪೈನ್ ಮನೆಗೆ ಹೋಗಿ ಅವರ ಮಕ್ಕಳನ್ನು ಎತ್ತಿಕೊಂಡು ಫೋಟೋಕ್ಕೆ ಫೋಸ್ ನೀಡಿದ್ದರು. ಅಲ್ಲಿಂದ ಅವರಿಗೆ ಬೇಬಿ ಸಿಟ್ಟರ್ ಎಂಬ ಹೆಸರು ಬಂದಿದೆ.

Comments

Leave a Reply

Your email address will not be published. Required fields are marked *