ಹಾವು-ಮುಂಗುಸಿ, ನಾಯಿ-ಬೆಕ್ಕಿನ ಕದನವನ್ನು ಆಗಾಗ ನೋಡಿರುತ್ತೀರಿ. ಆದರೆ ಇಲ್ಲಿ 4 ಬೆಕ್ಕುಗಳೊಂದಿಗೆ ಹೋರಾಡಿ ತನ್ನ ಪ್ರಾಣ ಉಳಿಸಿಕೊಂಡು ಪಾರಾದ ವಿಷಕಾರಿ ನಾಗರ ಹಾವಿನ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ನಟ ನೈಲ್ ನಿತಿನ್ ಮುಕೇಶ್ ಎಂಬವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಭಾನುವಾರ ಶೇರ್ ಮಾಡಿಕೊಂಡಿದ್ದಾರೆ. ನಟ ತಮ್ಮ ಮುಂಬರುವ ಬೈಪಾಸ್ ರೋಡ್ ಚಿತ್ರದ ಚಿತ್ರೀಕರಣಕ್ಕೆ ತೆರಳಿದ ಸಂದರ್ಭದಲ್ಲಿ ಬೆಕ್ಕುಗಳು ಹಾಗೂ ಹಾವು ಇರುವುದನ್ನು ಗಮನಿಸಿದ್ದಾರೆ. ಅಲ್ಲದೆ ತಮ್ಮ ಮೊಬೈಲ್ ನಲ್ಲಿ ಅವುಗಳ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ವಿಡಿಯೋದಲ್ಲೇನಿದೆ..?
ವಿಷಕಾರಿ ನಾಗರಾಹವನ್ನು ನಾಲ್ಕು ಬೆಕ್ಕುಗಳು ಸುತ್ತುವರಿದಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಇದರಲ್ಲಿ 2 ಬೆಕ್ಕುಗಳು ಹಾವಿನ ಮೇಲೆ ದಾಳಿ ಮಾಡಲು ಯತ್ನಿಸಿವೆ. ಹಾವು ಕೂಡ ತನ್ನ ಮೇಲೆ ದಾಳಿ ಮಾಡುತ್ತಿರುವ ಬೆಕ್ಕುಗಳಿಂದ ಪಾರಾಗಲು ಶತ ಪ್ರಯತ್ನ ಮಾಡುತ್ತದೆ. ಕೊನೆಗೆ ಹೇಗೋ ಬೆಕ್ಕುಗಳಿಂದ ತಪ್ಪಿಸಿಕೊಂಡು ಪಕ್ಕದಲ್ಲೇ ಇರುವ ಗಿಡಗಳೊಳಗೆ ಸೇರಿಕೊಂಡು ಬಚಾವ್ ಆಗಿದೆ.
ಈ ದೃಶ್ಯಗಳು ನಟನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇಂದು ಬೆಳಗ್ಗೆ ಚಿತ್ರದ ಶೂಟಿಂಗ್‍ಗೆ ತೆರಳಿದ್ದೆ. ಹೀಗೆ ಬಂದು ಕಾರಿನಿಂದ ಇಳಿದಾಗ ಈ ದೃಶ್ಯವನ್ನು ನೋಡಿದೆ ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ನಟ ತಮ್ಮ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ತಕ್ಷಣವೇ 77 ಸಾವಿರಕ್ಕೂ ಹೆಚ್ಚು ವ್ಯೂವ್ ಪಡೆದುಕೊಂಡಿದ್ದು, ಸಾಕಷ್ಟು ಕಮೆಂಟ್ ಗಳು ಕೂಡ ಬಂದಿವೆ. ವ್ಯಕ್ತಿಯೊಬ್ಬನ ಕಮೆಂಟ್ ಗೆ ವನ್ಯಜೀವಿ ಅಧಿಕಾರಿಗಳಿಗೆ ಮಾಹಿತಿ ನಿಡಿದ್ದು, ಕೂಡಲೇ ಅವರು ಸ್ಥಳಕ್ಕೆ ದೌಡಾಯಿಸಿ ಹಾವನ್ನು ರಕ್ಷಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
View this post on Instagram

Leave a Reply