‘ನಾನು ನಡೆಯಲ್ಲ ಅಷ್ಟೇ’ – ಸತ್ತಂತೆ ನಟಿಸೋ ಸೋಮಾರಿ ಕುದುರೆಗಳ ವಿಡಿಯೋ ವೈರಲ್

ಕೆಲವೊಮ್ಮೆ ಕೆಲವರಿಗೆ ಕೆಲಸ ಮಾಡಲು ಹೋದರೆ ಸೋಮಾರಿತನ ಅಡ್ಡಬರುತ್ತದೆ. ಈ ಸೋಮಾರಿತನ ಈಗ ಕುದುರೆಗಳಿಗೆ ಬಂದಿದ್ದು ವಿಡಿಯೋ ವೈರಲ್ ಆಗಿದೆ.

ಹೌದು. ಕುದುರೆಗಳು ತಮ್ಮ ಕೆಲಸ ನಿರ್ವಹಿಸಲು ಹಿಂದೇಟು ಹಾಕಿದ್ದ ಅದಕ್ಕೆ ಖತರ್ನಾಕ್ ಪ್ಲಾನೊಂದನ್ನು ರೂಢಿಸಿಕೊಂಡಿವೆ. ಕುದುರೆಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗುತ್ತಿದೆ.

ವಿಡಿಯೋದಲ್ಲೇನಿದೆ..?
ಯಾರಾದರೂ ಬಂದು ತನ್ನ ಮೇಲೆ ಕುಳಿತು ಸವಾರಿ ಮಾಡಲು ಪ್ರಯತ್ನಿಸಿದರೆ ಆ ವೇಳೆ ಕುದುರೆ ಧೊಪ್ಪನೆ ಕುಸಿದು ಬಿದ್ದು ಸತ್ತಂತೆ ನಟನೆ ಮಾಡುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಕ್ರಿಟ್ಟರ್ ಕ್ಲಬ್ ಎಡಿಟ್ ಮಾಡಿರುವ ಈ ವಿಡಿಯೋವನ್ನು ಫ್ರಾಸಿಸ್ಕೋ ಝಲಾಸರ್ ಎಂಬವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ಬೇರೆ ಬೇರೆ ಕುದುರೆಗಳಿದ್ದು, ಆದರೆ ಸೋಮಾರಿತನ ಬಂದರೆ ಎಲ್ಲವೂ ಒಂದೇ ರೀತಿಯಾಗಿ ನಟನೆ ಮಾಡುತ್ತಿವೆ. ಸವಾರಿ ಮಾಡಲೆಂದು ಯಾರಾದರೂ ತನ್ನ ಮೇಲೆ ಹತ್ತಿ ಕುಳಿತರೆ ನಟನೆ ಮಾಡಿ ಪ್ರವಾಸಿಗರಿಗೆ ಶಾಕ್ ಕೊಡುತ್ತವೆ. ಹೀಗೆ ನಟನೆ ಮಾಡಿದಾಗ ಸವಾರಿ ಮಾಡಲು ಬಂದವರು ಕುದುರೆ ಸತ್ತಿದೆ ಎಂದು ತಿಳಿದು ಮುಂದಕ್ಕೆ ಹೋಗುತ್ತಾರೆ. ಕುದುರೆಗೂ ಇದೇ ಬೇಕಾಗಿರುವುದು ಎಂದು ಝಲಾಸರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವಿಡಿಯೋ ಪೋಸ್ಟ್ ಮಾಡಿದ 2 ವಾರದಲ್ಲಿ ಸರಿಸುಮಾರು ಎರಡೂವರೆ ಕೋಟಿ ಜನ ವೀಕ್ಷಿಸಿದ್ದಾರೆ. ಯೂಟ್ಯೂಬ್ ನಲ್ಲಿ ಕೂಡ ಈ ವಿಡಿಯೋ ಹರಿದಾಡುತ್ತಿದ್ದು, ಸಾವಿರಾರು ಮಂದಿ ಕಮೆಂಟ್ಸ್ ಮಾಡುತ್ತಿದ್ದಾರೆ.

https://www.facebook.com/frasisco.zalar.9/videos/173767363758806/

 ನಾನು ಮಹಡಿಯಲ್ಲಿ ಮಲಗಿದ್ದಾಗ ಕೆಲವೊಮ್ಮೆ ತಾಯಿ ಕೆಳಗಿನಿಂದ ನನ್ನನ್ನು ಜೋರಾಗಿ ಕರೆದು ಪಾತ್ರೆ ತೊಳೆಯುವಂತೆ ಹೇಳಿದಾಗ ಇದೇ ರೀತಿ ನಿದ್ದೆ ಮಾಡಿದವರಂತೆ ನಟನೆ ಮಾಡುತ್ತೇವೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೊಬ್ಬರು ತನ್ನ ನಾಲಗೆ ಹೊರಗೆ ಹಾಕಿ ಕಣ್ಣಾಲಿಗಳನ್ನು ಮೇಲೆ ಮಾಡಿರುವುದನ್ನು ನೋಡಿದರೆ ಕುದುರೆಯ ನಾಟಕ ನಂಬಲಸಾಧ್ಯ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ನನ್ನ ಇಡೀ ಜೀವನವನ್ನು ಕುದುರೆ ಬಿಂಬಿಸುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *