– ಸಿಟ್ಟುಮಾಡ್ಕೊಂಡಿರೋ ವಧು ವೀಡಿಯೋ ವೈರಲ್
ಎಲ್ಲರ ಜೀವನದಲ್ಲೂ ಮದುವೆ ಎಂಬುದು ಬಹಳ ಪ್ರಮುಖವಾದ ಘಟ್ಟ. ಹೀಗಾಗಿ ವಿವಾಹದ ದಿನದ ಪ್ರತಿ ಸೆಕೆಂಡನ್ನು ಸ್ಮರಣೀಯ ಮತ್ತು ತುಂಬಾ ವಿಶೇಷವಾಗಿಸಲು, ವಧು-ವರರು ಪ್ರಯತ್ನವನ್ನು ಪಡುತ್ತಾರೆ. ಅಂತಹ ಒಂದು ಘಟನೆಯಲ್ಲಿ ವಧು ಮಂಟಪ ಪ್ರವೇಶಕ್ಕೆ ಆಯ್ಕೆ ಮಾಡಿದ ಹಾಡನ್ನು ಹಾಕುವವರೆಗೂ ಹಾಲ್ ಪ್ರವೇಶಿಸಲು ನಿರಾಕರಿಸಿರುವ ಪ್ರಸಂಗವೊಂದು ನಡೆದಿದೆ.
ಈ ಘಟನೆಯ ವಿಡಿಯೋ ತುಣುಕು ಇನ್ಸ್ ಸ್ಟಾಗ್ರಾಂನಲ್ಲಿ ಫೋಟೋಗ್ರಫಿ ಪೇಜ್‍ನಿಂದ “ದಿ ವೆಡ್ಡಿಂಗ್‍ಬ್ರಿಗೇಡ್” ಹೆಸರಿನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಾಕಷ್ಟು ಕಾಮೆಂಟ್ ಗಳು ಬರುತ್ತಿವೆ. ಆದರೆ ಈ ಘಟನೆ ಎಲ್ಲಿ ನಡೆದಿರುವುದು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸೇರಲು ಮಂಗಳೂರಿಗರ ಹಿಂದೇಟು – ಹೊಸ ಆಫರ್ ನೀಡಿದ್ರು ಎನ್. ಶಶಿಕುಮಾರ್

ವೀಡಿಯೋದಲ್ಲೇನಿದೆ..?: ವಧು ತನ್ನ ಸ್ನೇಹಿತರು, ಒಡಹುಟ್ಟಿದವರು ಮತ್ತು ಸೋದರಸಂಬಂಧಿಗಳೊಂದಿಗೆ ಮದುವೆ ಹಾಲ್ ಗೆ ಎಂಟ್ರಿ ಕೊಡಲು ಮುಂದಾಗಿದ್ದಾಳೆ. ಆದರೆ ಇದ್ದಕ್ಕಿಂದತೆ ಮುಂದೆ ಚಲಿಸಲು ನಿರಾಕರಿಸುತ್ತಾಳೆ. ಯಾಕಂದರೆ ಕೆ ತಾನು ಸೆಲೆಕ್ಟ್ ಮಾಡಿಟ್ಟ ಹಾಡನ್ನು ಅಲ್ಲಿ ಪ್ಲೇ ಮಾಡಲಿಲ್ಲ. ಇದರಿಂದ ಸಿಟ್ಟಿಗೆದ್ದ ವಧು, ನಾನು ಆಯ್ಕೆ ಮಾಡಿರುವ ಹಾಡನ್ನು ಪ್ಲೇ ಮಾಡುವವರೆಗೂ ನಾನು ಹಾಲ್ ಗೆ ತೆರಳಲ್ಲಿ ಎಂದು ಹಠ ಹಿಡಿಯುತ್ತಾಳೆ. ಅಲ್ಲದೆ ತಾನು ಮೊದಲೇ ಹೇಳಿದ ಹಾಡನ್ನು ಯಾಕೆ ಹಾಕಲಿಲ್ಲ ಎಂದು ಹೇಳುತ್ತಾ ತನ್ನ ಜೊತೆಗಿದ್ದವರ ಮುಂದೆ ಭಾವುಕಳಾಗುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಪಂಜಶೀರ್ ವಶಕ್ಕೆ ಮುಂದಾಗಿದ್ದ 300 ತಾಲಿಬಾನಿಗಳು ಮಟಾಷ್!

ಈ ವಿಡಿಯೋ ಇದುವರೆಗೆ 17 ಸಾವಿರಕ್ಕೂ ಅಧಿಕ ಲೈಕ್‍ಗಳನ್ನು ಪಡೆದುಕೊಂಡಿದೆ. ಸುಮಾರು 316 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆಯಾಗಿದೆ. ಅಲ್ಲದೆ ಸಾಕಷ್ಟು ಕಾಮೆಂಟ್ ಗಳು ಕೂಡ ಬಂದಿದ್ದು, ನೆಟ್ಟಿಗರು ವಧುವಿನ ಬೆಂಬಲಕ್ಕೆ ಸಂಪೂರ್ಣವಾಗಿ ನಿಂತಿದ್ದಾರೆ. ವಧು ಆಯ್ಕೆ ಮಾಡಿದ ಹಾಡನ್ನು ಪ್ಲೇ ಮಾಡಬೇಕಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅವಳು ನಾಟಕದ ರಾಣಿ ಎಂದು ಜರಿದಿದ್ದಾರೆ. ಮತ್ತೆ ಕೆಲವರು ಇದೊಂದು ಸ್ಕ್ರಿಪ್ಟ್ ಮಾಡಿದ ಮದುವೆ ಎಂದೂ ಕರೆದರು.
View this post on Instagram

Leave a Reply