ಕತ್ರಿನಾ ಜೊತೆಗಿನ ಕೆಮಿಸ್ಟ್ರಿ ವಿಡಿಯೋ ಹಂಚಿಕೊಂಡ ಸಲ್ಮಾನ್

ಮುಂಬೈ: ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ಹಾಟ್ ಬ್ಯೂಟಿ ಕತ್ರಿನಾ ಕೈಫ್ ಅವರ ಕೆಮೆಸ್ಟ್ರಿಯ ಜಾಹೀರಾತಿನ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಕ್ಕೆ ಭಾಯಿಜಾನ್ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಸಲ್ಮಾನ್ ಮತ್ತು ಕತ್ರಿನಾ ಇತ್ತೀಚೆಗೆ ಬೇಸಿಗೆ ಉಡುಪಿನ ರಾಯಭಾರಿಗಳಾಗಿ ಕಾಣೆಸಿಕೊಂಡಿದ್ದಾರೆ. ಈ ವಿಡಿಯೋವನ್ನು ಸಲ್ಲು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರಿಬ್ಬರ ಕೆಮಿಸ್ಟ್ರಿ ಪರದೆಯ ಮೇಲೆ ಮತ್ತು ಹೊರಗೆ ಅದ್ಭುತವಾಗಿ ಮಾಡಿಬಂದಿದೆ ಅಂತಾ ಹಲವರು ಕಮೆಂಟ್ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಒಂದೇ ಮಗ್ ನಿಂದ ಇವರಿಬ್ಬರು ಕಾಫಿ ಕುಡಿದಿದ್ದರು.

ಸಲ್ಮಾನ್ ಮತ್ತು ಕತ್ರಿನಾ ಬಹಳ ಹಿಂದೆಯೇ ಬ್ರೇಕ್ ಆಪ್ ಮಾಡಿಕೊಂಡಿದ್ದರೂ ಈಗಲೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ವಾಸ್ತವವಾಗಿ, ಕತ್ರಿನಾ ಇನ್ನೂ ಸಲ್ಮಾನ್ ಕುಟುಂಬಕ್ಕೆ ತುಂಬಾ ಹತ್ತಿರದಲ್ಲಿದ್ದು ಸಾಮಾನ್ಯವಾಗಿ ಒಟ್ಟಾಗಿ ಊಟಕ್ಕೆ ಹೋಗುತ್ತಾರೆ. ಕೆಲವೊಮ್ಮೆ ಒಟ್ಟಿಗೆ ಹ್ಯಾಂಗ್ ಔಟ್ ಮಾಡುತ್ತಾರೆ.

ಅಲಿ ಅಬ್ಬಾಸ್ ನಿರ್ದೇಶನದ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಇದೇ ಜೋಡಿ ಕಮಾಲ್ ಮಾಡಿತ್ತು. ಇದೇ ಚಿತ್ರದ `ದಿಲ್ ದಿಯಾನ್ ಗಲ್ಲನ್’ ಹಾಡಿನಲ್ಲಿ ಸಲ್ಮಾನ್-ಕತ್ರಿನಾ ಕೆಮಿಸ್ಟ್ರಿ ಅತ್ಯದ್ಭುತವಾಗಿ ಮೂಡಿಬಂದಿತ್ತು.

 

ಪ್ರಸ್ತುತ ರೇಸ್ 3 ಬಿಡುಗಡೆಗಾಗಿ ಸಲ್ಮಾನ್ ಸಜ್ಜಾಗುತ್ತಿದ್ದಾರೆ. ಶೀಘ್ರದಲ್ಲೇ ಅವರ ಮುಂದಿನ `ಭಾರತ್’ ಚಿತ್ರೀಕರಣವು ಪ್ರಾರಂಭವಾಗುತ್ತಿದೆ. ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅಭಿನಯದ `ಥಗ್ಸ್ ಆಫ್ ಹಿಂದೊಸ್ಥಾನ್’ ಚಿತ್ರದಲ್ಲಿ ಕತ್ರಿನಾ ನಟಿಸುತ್ತಿದ್ದಾರೆ. ಇದರ ಜೊತೆಗೆ ಶಾರೂಖ್ ಖಾನ್ ಅವರ ಜೊತೆ `ಝೀರೋ’ ಸಿನಿಮಾದಲ್ಲಿಯೂ ಕತ್ರಿನಾ ನಟಿಸುತ್ತಿದ್ದಾರೆ.

https://www.instagram.com/p/Bg03YUnFDR1/?taken-by=beingsalmankhan

Comments

Leave a Reply

Your email address will not be published. Required fields are marked *