ಮೃಗಾಲಯದಲ್ಲಿ ಧಮ್ ಎಳೆದ ಚಿಂಪಾಂಜಿ- ವಿಡಿಯೋ ಫುಲ್ ವೈರಲ್

ನವದೆಹಲಿ: ಇಂಡೋನೇಶಿಯಾ ಪ್ರಾಣಿ ಸಂಗ್ರಹಾಲಯದಲ್ಲಿ ಚಿಂಪಾಂಜಿಯೊಂದು ಮನುಷ್ಯರಂತೆ ಸಿಗರೇಟ್ ಸೇದಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.

22 ವರ್ಷದ ಅಪೆ ಎಂಬ ಹೆಸರಿನ ಜಿಂಪಾಂಜಿಯೊಂದು ಸಿಗರೇಟ್ ಸೇದಿದೆ. ಭಾನುವಾರ ರಜಾ ದಿನವಾದ್ದರಿಂದ ಸಾಮಾನ್ಯವಾಗಿ ಮೃಗಾಲಯಕ್ಕೆ ಬರುವವರ ಸಂಖ್ಯೆ ಜಾಸ್ತಿ. ಹೀಗೆ ಬಂದ ವ್ಯಕ್ತಿಯೊಬ್ಬ ಸಿಗರೇಟನ್ನು ಅರ್ಧ ಸೇದಿ ಚಿಂಪಾಜಿ ಪಕ್ಕ ಬಿಸಾಕಿದ್ದ. ಇದನ್ನು ಗಮನಿಸಿದ ಚಿಂಪಾಂಜಿ ನೇರವಾಗಿ ಸಿಗರೇಟ್ ಇದ್ದ ಸ್ಥಳಕ್ಕೆ ಬಂದು ಅದನ್ನು ತನ್ನ ಕೈಯಲ್ಲಿ ಎತ್ತಿಕೊಂಡಿದೆ. ಅಲ್ಲದೇ ಅಲ್ಲೇ ಪಕ್ಕಕ್ಕೆ ಹೋಗಿ ಮನುಷ್ಯರಂತೆ ತಾನೂ ಕೂತು ಸಿಗರೇಟ್ ಸೇದಿದೆ. ಇದನ್ನು ಮರಿಸನ್ ಗುಸಿಯಾನೊ ಎಂಬವರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ಘಟನೆ ಕುರಿತು ಬ್ಯಾಂಡಂಗ್ ಮೃಗಾಲಯದ ವಕ್ತಾರ ಸುಲ್ಹಾನ್ ಪ್ರತಿಕ್ರಿಯಿಸಿದ್ದು, ಮೃಗಾಲಯದೊಳಗೆ ಇಂತಹ ಘಟನೆ ನಡೆದಿರುವುದು ವಿಷಾದವೇ ಸರಿ. ಇದಕ್ಕೆ ಅಲ್ಲಿನ ಸಿಬ್ಬಂದಿಗಳೇ ನೇರ ಹೊಣೆ ಅಂತ ಹೇಳಿದ್ದಾರೆ.

ಯಾಕಂದ್ರೆ ಸಾಮಾನ್ಯವಾಗಿ ಮೃಗಾಲಯದೊಳಗೆ ಪ್ರಾಣಿಗಳಿಗೆ ಆಹಾರ ನೀಡಲು ಅವಕಾಶ ಇರುವುದಿಲ್ಲ. ಅಂತದ್ದರಲ್ಲಿ ಈ ವ್ಯಕ್ತಿಯೊಬ್ಬ ಸಿಗರೇಟ್ ನೀಡಿದ್ದಾನೆಂದರೆ ಈ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಅಂತ ಅವರು ತಿಳಿಸಿದ್ದಾರೆ. ಪ್ರಾಣಿ ದಯಾ ಸಂಘದವರು ಕೂಡ ಪ್ರವಾಸಿಗರ ಈ ವರ್ತನೆಯನ್ನು ಖಂಡಿಸಿದ್ದಾರೆ.

https://www.facebook.com/marison.guciano/videos/10213499306150627/?lst=100003550156104%3A1640542585%3A1520584975

Comments

Leave a Reply

Your email address will not be published. Required fields are marked *