ವಿಡಿಯೋ: ಅಡುಗೆ ಮಾಡಲು ವ್ಯಕ್ತಿಯಿಂದ ಶೌಚಾಲಯದ ನೀರು ಉಪಯೋಗ

ಮುಂಬೈ: ಆಹಾರ ಮಾರಾಟಗಾರನೊಬ್ಬ ಅಡುಗೆ ಮಾಡಲು ಶೌಚಾಲಯದ ನೀರು ಉಪಯೋಗಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇಡ್ಲಿ ಮಾರಾಟ ಮಾಡುವ ವ್ಯಕ್ತಿ ಶೌಚಾಲಯದ ನಲ್ಲಿಯಲ್ಲಿ ನೀರು ತುಂಬಿಸಿಕೊಂಡು ಅದನ್ನು ಚಟ್ನಿ ಮಾಡಲು ಉಪಯೋಗಿಸಿದ್ದಾನೆ. ವ್ಯಕ್ತಿ ಶೌಚಾಲಯದ ನೀರು ಉಪಯೋಗಿಸುವ ವಿಡಿಯೋ ವೈರಲ್ ಆಗಿದ್ದು, ಯಾವಾಗ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಆಹಾರ ಮತ್ತು ಔಷಧ ಆಡಳಿತ(ಎಫ್‍ಡಿಎ) ತನಿಖೆ ಆರಂಭಿಸಿದೆ. ಅಲ್ಲದೆ ಇಂತಹ ನೀರನ್ನು ಉಪಯೋಗಿಸಬಾರದು. ಏಕೆಂದರೆ ಇಂತಹ ನೀರು ಕುಲಷಿತಗೊಂಡಿರುತ್ತದೆ ಎಂದು ಎಫ್‍ಡಿಎ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.

ನಾವು ವಿಡಿಯೋದಲ್ಲಿ ಇರುವ ವ್ಯಕ್ತಿ ಹಾಗೂ ಬೇರೆಯವರು ಅಡುಗೆ ಹೇಗೆ ಮಾಡುತ್ತಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತೇವೆ. ಶೌಚಾಲಯದ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂದು ಮುಂಬೈ ಬ್ರ್ಯಾಂಚ್‍ನ ಎಫ್‍ಡಿಎ ಅಧಿಕಾರಿ ಶೈಲೇಶ್ ಅದಾವ್ ಹೇಳಿದ್ದಾರೆ.

ವಿಡಿಯೋದಲ್ಲಿ ಇರುವ ವ್ಯಕ್ತಿ ಸಿಕ್ಕಿದ ತಕ್ಷಣ ಆತನ ಲೈಸೆನ್ಸ್ ನನ್ನು ಪರಿಶೀಲಿಸುತ್ತೇವೆ. ಬಳಿಕ ಯಾವುದಾದರೂ ಸ್ಯಾಂಪಲ್ ಸಿಕ್ಕರೆ ಅದನ್ನು ವಶಕ್ಕೆ ಪಡೆದು ನಂತರ ಸೂಕ್ತ ಕ್ರಮಕೈಗೊಳ್ಳುತ್ತೇವೆ. ನಾವು ವಿಡಿಯೋವನ್ನು ನೋಡಿದ್ದೇವೆ. ಯಾವ ಸ್ಥಳದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂಬುದನ್ನು ಪರಿಶೀಲಿಸುತ್ತಿದ್ದೇವೆ ಎಂದು ಶೈಲೇಶ್ ಹೇಳಿದ್ದಾರೆ.

https://twitter.com/sunilcredible/status/1134465408034070528?ref_src=twsrc%5Etfw%7Ctwcamp%5Etweetembed%7Ctwterm%5E1134465408034070528&ref_url=https%3A%2F%2Fwww.indiatoday.in%2Findia%2Fstory%2Fmumbai-idli-vendor-uses-toilet-water-to-cook-food-probe-ordered-watch-video-1539968-2019-06-01

Comments

Leave a Reply

Your email address will not be published. Required fields are marked *