225 ಕಿ.ಮೀ ವೇಗದಲ್ಲಿ ಹೋಗ್ತಿದ್ದಾಗ ಬೈಕಿನ ಬ್ರೇಕ್ ಹಾಕ್ದ ಪಕ್ಕದ ಸವಾರ: ವಿಡಿಯೋ ನೋಡಿ!

ಸ್ಯಾನ್ ಮರಿನೋ: ಮೋಟರ್ ರೇಸಿಂಗ್ ವೇಳೆ 225 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ಬೈಕಿನ ಮುಂಬದಿ ಬ್ರೇಕನ್ನು ಮತ್ತೊಂದು ಬೈಕಿನ ಸವಾರ ಹಾಕುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ.

ಸ್ಯಾನ್ ಮರಿನೋ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ನಡೆದ ಎಫ್‍ಐಎಂ ಮೋಟೋ2 ಗ್ಯಾಂಡ್ ಪ್ರಿಕ್ಸ್ ಅಂತರಾಷ್ಟ್ರೀಯ ಚಾಂಪಿಯನ್‍ಷಿಪ್‍ ಬೈಕ್ ರೇಸಿಂಗ್ ವೇಳೆ ಇಟಲಿಯ ರೈಡರ್ ರೊಮಾನೋ ಫೆನಾಟಿಯವರು 225 ಕಿ.ಮೀಗೂ ಅಧಿಕ ವೇಗದಲ್ಲಿ ಸಾಗುತ್ತಿರುವಾಗಲೇ, ತಮ್ಮ ಪಕ್ಕದಲ್ಲೇ ಅಷ್ಟೇ ವೇಗದಲ್ಲಿ ಸಾಗುತ್ತಿದ್ದ ಸ್ಟೈಫಾನೋ ಮಾನ್ಜಿಯ ಬೈಕಿನ ಮುಂಬಾಗದ ಬ್ರೇಕ್‍ನ್ನು ಒತ್ತಿದ್ದಾರೆ. ಬ್ರೇಕ್ ಒತ್ತುತ್ತಿದಂತೆ ಬೈಕ್ ಅಲುಗಾಡಿದ್ದು, ಕೂಡಲೇ ಬೈಕನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಸವಾರ ಸ್ಟೈಫಾನೋ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಈ ರೇಸಿಂಗ್ ಕೂಟವು ಅಂತರಾಷ್ಟ್ರೀಯ ಮಟ್ಟದಲ್ಲಿ ನೇರಪ್ರಸಾರವಾಗುತ್ತಿದ್ದು, ಬೈಕ್ ಸವಾರ ಮತ್ತೊಂದು ಬೈಕಿನ ಬ್ರೇಕ್ ಹಾಕುತ್ತಿರುವ ದೃಶ್ಯ ನೋಡುಗರನ್ನು ತಲ್ಲಣಗೊಳಿಸಿದೆ. ಅಲ್ಲದೇ ರೈಡರ್ ವಿರುದ್ಧ ಸಾಕಷ್ಟು ಟೀಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದ್ದವು.

ಕೂಡಲೇ ಎಚ್ಚೆತ್ತ ಮೋಟೋ ಜಿಪಿ ಆಯೋಜಕರು ಫೆನಾಟಿಗೆ 2 ವರ್ಷಗಳ ಕಾಲ ರೇಸ್ ಮೇಲೆ ನಿಷೇಧ ಹೇರಿದ್ದಾರೆ. ಬಳಿಕ ತಮ್ಮ ತಪ್ಪಿನ ಅರಿವಾದ ಕೂಡಲೇ ಫೆನಾಟಿ ತಮ್ಮ ರೇಸಿಂಗ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ.

https://twitter.com/2018MotoGP/status/1039597214648098816

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=P_WO9RtoBIk

Comments

Leave a Reply

Your email address will not be published. Required fields are marked *