30 ಅಡಿ ಆಳದ ಬಾವಿಗೆ ಬಿದ್ದ ಚಿರತೆಯ ರಕ್ಷಣೆ- ಮನಮುಟ್ಟುವ ವಿಡಿಯೋ ನೋಡಿ

ಮುಂಬೈ: ಮಹಾರಾಷ್ಟ್ರದ ಯಡವ್ ವಾಡಿ ಗ್ರಾಮದಲ್ಲಿ 30 ಅಡಿ ಆಳದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಇಂದು ರಕ್ಷಣೆ ಮಾಡಿದೆ. ಚಿರತೆ ರಕ್ಷಣೆಯ ಮನಮುಟ್ಟುವ ವಿಡಿಯೋವನ್ನು ಪ್ರಾಣಿಗಳ ಕಲ್ಯಾಣ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲೇನಿದೆ?:
7 ವರ್ಷದ ಹೆಣ್ಣು ಚಿರತೆಯೊಂದು ಬಾವಿಯೊಳಗೆ ಬಿದ್ದಿದೆ. ಇದನ್ನು ಗಮನಿಸಿದ ಸಾರ್ವಜನಿಕರು ಸಣ್ಣ ಮರದ ಏಣಿಯನ್ನು ಬಾವಿಗಿಳಿಸಿದ್ದಾರೆ. ಹೀಗಾಗಿ ಚಿರತೆ ಅದರ ಮೇಲೆ ಕುಳಿತಿರುವುದನ್ನು ಕಾಣಬಹುದು. ಇತ್ತ ಸಾರ್ವಜನಿಕರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಸೇರಿಕೊಂಡು ಚಿರತೆಯ ರಕ್ಷಣೆಗೆಂದು ಗೂಡನ್ನು ಸಿದ್ಧಪಡಿಸಿ ಅದನ್ನು ಬಾವಿಗೆ ಇಳಿಸಿದ್ದಾರೆ.

ಈ ವೇಳೆ ಯಾವುದೇ ಮುಲಾಜಿಲ್ಲದೇ ಚಿರತೆ ಮರದ ಏಣಿಯಿಂದ ಕೂಡಲೇ ಗೂಡಿನೊಳಗೆ ಸೇರಿಕೊಂಡಿದೆ. ಚಿರತೆ ಗೂಡೊಳಗೆ ನುಗ್ಗುತ್ತಿದ್ದಂತೆಯೇ ಗೂಡಿನ ಬಾಗಿಲನ್ನು ಮುಚ್ಚಿದ್ದಾರೆ. ನಂತರ ಗೂಡನ್ನು ಬಾವಿಯೊಳಗಿಂದ ಮೇಲಕ್ಕೆತ್ತಲಾಗಿದೆ. ಈ ಮೂಲಕ ಚಿರತೆಯನ್ನು ರಕ್ಷಿಸಲಾಗಿದೆ.

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ವೈರಲ್ ಆಗಿದೆ. ವೈಲ್ಡ್ ಲೈಫ್ ಎಸ್‍ಒಎಸ್ ಗೆ ನಾನು ಧನ್ಯವಾದ ಸಮರ್ಪಿಸುತ್ತೇನೆ. ಅವರಿಂದಾಗಿ ಇಂದು ಒಂದು ಸುಂದರ ಚಿರತೆಯ ಪ್ರಾಣ ಉಳಿದಿದೆ. ಒಳ್ಳೆಯ ಕೆಲಸ ಅಂತ ಕೆಲವರು ಕಮೆಂಟ್ ಮಾಡಿದ್ದಾರೆ. ರಕ್ಷಣೆಯ ವಿಡಿಯೋ ನೋಡುತ್ತಿದ್ದ ನನಗೆ ಚಿರತೆ ಅಷ್ಟು ಸುಲಭದಲ್ಲಿ ಗೂಡಿನ ಒಳಗೆ ಹೋಗಿದ್ದನ್ನು ನಂಬಲಾಗಿಲ್ಲ. ಇದು ಅದ್ಭುತವಾಗಿತ್ತು. ಉತ್ತಮ ಕೆಲಸ ಅಂತ ಮತ್ತೊಬ್ಬರು ಹೇಳಿದ್ದಾರೆ.

ಬಾವಿಯಿಂದ ಹೊರತೆಗೆದ ಚಿರತೆಯನ್ನು ಸದ್ಯ ಮಣಿಕ್ಡೊದಲ್ಲಿನ ಚಿರತೆಗಳ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ ಅಂತ ವೈಲ್ಡ್ ಲೈಫ್ ಎಸ್‍ಒಎಸ್ ತಿಳಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.facebook.com/wildlifesosindia/videos/2377705512270267/

Comments

Leave a Reply

Your email address will not be published. Required fields are marked *