ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅಪಾಯಕ್ಕೆ ಸಿಕ್ಕ ಪ್ರಯಾಣಿಕನ ರಕ್ಷಣೆ: ವಿಡಿಯೋ ವೈರಲ್!

ಮುಂಬೈ: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಪ್ರಯಾಣಿಕನೋರ್ವ ಅಪಾಯಕ್ಕೆ ಸಿಲುಕಿದ್ದ ಘಟನೆ ಸೋಮವಾರ ಮಹಾರಾಷ್ಟ್ರದ ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ.

ಮುಂಬೈನ ಪನ್ವೆಲ್ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸಹ ಪ್ರಯಾಣಿಕರು ಮತ್ತು ರೈಲ್ವೇ ಪೊಲೀಸ್ ಅಧಿಕಾರಿಗಳ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕನನ್ನು ದುರಂತದಿಂದ ಪಾರು ಮಾಡಿದ್ದಾರೆ.

ಚಲಿಸುತ್ತಿದ್ದ ರೈಲು ಹತ್ತಲು ಹೋದ ಪ್ರಯಾಣಿಕನೊರ್ವ ನಿಯಂತ್ರಣ ಸಿಗದೇ ರೈಲಿನ ಕಂಬಿ ಹಿಡಿದು ನೇತಾಡುತ್ತಿದ್ದ. ರೈಲು ವೇಗವಾಗಿ ಚಲಿಸುತ್ತಿದ್ದರಿಂದ ಆತ ಒಳಗೂ ಹೋಗಲಾರದೇ ರೈಲಿನಿಂದ ಕೆಳಗೂ ಇಳಿಯಲಾಗದೇ ಅಪಾಯಕ್ಕೆ ಸಿಲುಕಿದ್ದ. ಇದನ್ನು ಗಮನಿಸಿದ ರೈಲಿನಲ್ಲಿದ್ದ ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದಾರೆ. ಕೂಡಲೇ ರೈಲು ನಿಲ್ದಾಣದ ಬಳಿಯಿದ್ದ ಪ್ರಯಾಣಿಕ ಹಾಗೂ ರೈಲ್ವೇ ಪೊಲೀಸರು ಕೂಡಲೇ ಓಡಿ ಬಂದು ವ್ಯಕ್ತಿಯನ್ನು ಎಳೆದುಕೊಂಡಿದ್ದಾರೆ.

ಪ್ರಯಾಣಿಕನನ್ನು ಸಾವಿನ ಅಂಚಿನಿಂದ ತಪ್ಪಿಸುವ ದೃಶ್ಯಗಳು ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಸಾಕಷ್ಟು ವೈರಲ್ ಆಗಿದೆ.

https://www.youtube.com/watch?v=J6FJNBP5H_Q

Comments

Leave a Reply

Your email address will not be published. Required fields are marked *