ನಾಗರಹಾವಿನ ಮರಿಗಳ ಜಗಳ- ಮೈ ಜುಮ್ಮೆನಿಸೋ ವಿಡಿಯೋ ನೋಡಿ

ಉಡುಪಿ: ನಾಗರಹಾವು- ಮುಂಗುಸಿ ಜಗಳ ಆಡೋದನ್ನು ನೋಡಿದ್ದೀರಿ. ಆದ್ರೆ ಇದು ನಾಗರ ಹಾವಿನ ಮರಿಗಳ ಜಗಳ.

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಶಿಲೆ ಕಲ್ಲು ರಾಶಿಯಲ್ಲಿ ನಾಗರ ಹಾವು ಅವಿತಿತ್ತು. ಕಲ್ಲು ತೆರವು ಮಾಡುವಾಗ ಹಾವಿನ ಬಲಭಾಗದ ವಿಷದಗ್ರಂಥಿಗೆ ಏಟಾಗಿತ್ತು. ಹಾವು ಹಿಡಿಯುವ ಬಾಬಣ್ಣ ಎಂಬವರು ಈ ಹಾವನ್ನು ಉರಗತಜ್ಞ ಗುರುರಾಜ ಸನಿಲ್ ಅವರಿಗೆ ನೀಡಿದ್ದರು. ಇದರ ಶುಶ್ರೂಷೆ ನಡೆಸುತ್ತಿರುವಾಗಲೇ 20 ಮೊಟ್ಟೆಯನ್ನಿಟ್ಟಿತ್ತು. ಕೃತಕ ಕಾವಿನ ವ್ಯವಸ್ಥೆ ಮಾಡಿ, 12 ಮರಿಗಳನ್ನು ಉಳಿಸಕೊಳ್ಳಲಾಗಿದೆ.

ಮೊದಲ ಬಾರಿಗೆ ಮೊಟ್ಟೆಯೊಡೆದು ಹಾವಿನ ಮರಿಗಳು ಹೊರಬಂದ ದೃಶ್ಯವನ್ನು ನಾವಿಲ್ಲಿ ನೋಡಬಹುದು. ಆಟವೋ, ಕಚ್ಚಾಟವೋ ನಾಗನ ಮರಿಗಳು ಭಯಗೊಂಡು ಒಂದನ್ನೊಂದು ಬೆದರಿಸುವ, ತುಂಟಾಟ ಮಾಡುವ ದೃಶ್ಯ ಮಾತ್ರ ಎಲ್ಲರ ಗಮನಸೆಳೆದಿದೆ. ಇದೀಗ ಎಲ್ಲಾ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

https://www.youtube.com/watch?v=k0FYf5MPdOU&feature=youtu.be

Comments

Leave a Reply

Your email address will not be published. Required fields are marked *