ಫಿಟ್ನೆಸ್ ಚಾಲೆಂಜ್ ಆಯ್ತು, ಈಗ ಸಚಿನ್ ರಿಂದ ಹೊಸ #KitUpChallenge

ಮುಂಬೈ: ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರ ಫಿಟ್ನೆಸ್ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನು ಉಂಟು ಮಾಡಿತ್ತು. ಸದ್ಯ ಸಚಿನ್ ತೆಂಡೂಲ್ಕರ್ ಈ ಸಾಲಿಗೆ `ಕಿಟ್ ಅಪ್ ಚಾಲೆಂಜ್’ ಎಂಬ ಹೊಸ ಸವಾಲು ನೀಡಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಸಚಿನ್, ದೇಶದಲ್ಲಿ `ಹಮ್ ಫಿಟ್ ತೊ ಇಂಡಿಯಾ ಫಿಟ್’ ಸವಾಲನ್ನು ಈಗಾಗಲೇ ಹಲವರು ಸ್ವೀಕರಿಸಿದ್ದೀರಿ, ಸದ್ಯ ನಾನು ನಿಮಗೆ ಈ ವಿಡಿಯೋ ಮೂಲಕ ಕಿಟ್ ಅಪ್ ಚಾಲೆಂಜ್ ನೀಡುತ್ತಿದ್ದು, ನಿಮ್ಮ ಇಷ್ಟದ ಕ್ರೀಡೆಯನ್ನ ಆಡಿ ವಿಡಿಯೋ ಶೇರ್ ಮಾಡಿ ಎಂದು ತಿಳಿಸಿದ್ದಾರೆ.

https://www.instagram.com/p/BkjoYwTDh0C/?utm_source=ig_embed

ತಮ್ಮ ಇಷ್ಟದ ಕ್ರಿಕೆಟ್ ಕ್ರಿಕೆಟ್ ಆಡಿ ವಿಡಿಯೋ ಶೇರ್ ಮಾಡಿರುವ ಸಚಿನ್, ಹಲವು ಕ್ರೀಡಾಪಟುಗಳಿಗೆ ಚಾಲೆಂಜ್ ಮಾಡಿದ್ದಾರೆ. ಪ್ರಮುಖವಾಗಿ ಪಿವಿ ಸಿಂಧೂ, ಸೈನಾ ನೆಹ್ವಾಲ್, ವಿಜೇಂದರ್ ಸಿಂಗ್, ವಿರಾಟ್ ಕೊಹ್ಲಿ, ಮಿಥಾಲಿ ರಾಜ್, ಶ್ರೀಕಾಂತ್, ಸರ್ದಾರ್ ಸಿಂಗ್ ಅವರಿಗೆ ಚಾಲೆಂಜ್ ಮಾಡಿದ್ದಾರೆ.

ವಿಶೇಷವಾಗಿ ಸಚಿನ್ ತಮ್ಮ ಚಾಲೆಂಜ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮಾಡಿದ್ದು, ಸದ್ಯ ಸಚಿನ್ ಚಾಲೆಂಜ್ ಅನ್ನು ಮೋದಿ ಸ್ವೀಕರಿಸುತ್ತರಾ ಎಂಬುವುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಸಚಿನ್ ಚಾಲೆಂಜ್ ಮೋದಿ ಸ್ವೀಕರಿಸಿದರೆ ಅವರ ಇಷ್ಟ ಆಟ ಯಾವುದು ಎಂಬುದು ತಿಳಿಯಲಿದೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದ ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋ ಶೇರ್ ಮಾಡಿದ್ದರು.

Comments

Leave a Reply

Your email address will not be published. Required fields are marked *