ಬಿಹಾರ ಕಾರ್ಮಿಕರಿಂದ ಬೆಂಗ್ಳೂರಿಗೆ ಟೆನ್ಶನ್- ಗಾಯತ್ರಿನಗರದಲ್ಲಿ 7 ಕಾರ್ಮಿಕರು ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು: ಈಗಾಗಲೇ ಇಡೀ ಬೆಂಗಳೂರನ್ನೇ ಬಿಹಾರಿ ಪ್ರಕರಣ ಬೆಚ್ಚಿ ಬೀಳಿಸುತ್ತಿದೆ. ರೋಗಿ ನಂಬರ್ 419 ಹಿಸ್ಟರಿಯೇ ಒಂದು ಮಿಸ್ಟರಿಯಾಗಿದ್ದು, ಒಬ್ಬ ವ್ಯಕ್ತಿಯಿಂದ ನಗರದಲ್ಲಿ ಒಟ್ಟು 20 ಜನರಿಗೆ ಸೋಂಕು ದೃಢವಾಗಿದ್ದು, ಇದೀಗಾ ಹೊಂಗಸಂದ್ರ ಡೇಂಜರ್ ಝೋನ್‍ನಲ್ಲಿದೆ. ಈ ನಡುವೆ ಬಿಹಾರಿ ಕಾರ್ಮಿಕರು ಗಾಯಿತ್ರಿನಗರ ಜನರ ನೆಮ್ಮದಿ ಕೆಡಿಸಿದ್ದಾರೆ.

ಗಾಯಿತ್ರಿನಗರದಲ್ಲಿ 7 ಜನ ಬಿಹಾರಿ ಕೂಲಿ ಕಾರ್ಮಿಕರು ಕಾಣಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆಯೇ ಗಾಯಿತ್ರಿನಗರದ ರಸ್ತೆಗಳಲ್ಲಿ ಬಿಹಾರಿ ಮೂಲದ ಕಾರ್ಮಿಕರು ಓಡಾಟ ಮಾಡಿದ್ದಾರೆ. ಅದರಲ್ಲೂ ಗ್ರೀನ್ ಜೋನ್‍ನಲ್ಲಿ ಕಾಣಿಸಿಕೊಂಡ ಕೂಲಿ ಕಾರ್ಮಿಕರಿಂದ ಆತಂಕ ಹೆಚ್ಚಾಗಿದೆ. ಈ ಮೂಲಕ ಹೊಂಗಸಂದ್ರ ಮಾತ್ರವಲ್ಲದೆ ಬೆಂಗಳೂರಿನ ಗ್ರೀನ್‍ಜೋನ್ ಆಗಿದ್ದ ಜಾಗಕ್ಕೂ ಕೂಲಿ ಕಾರ್ಮಿಕರು ಬಂದಿದ್ದಾರೆ.

ಬಿಹಾರಿ ಮೂಲದ ಕಾರ್ಮಿಕರು ಗಾಯಿತ್ರಿನಗರದಲ್ಲಿರುವ ಸ್ನೇಹಿತರ ರೂಮಿಗೆ ಬಂದಿದ್ದಾರೆ. ಏರಿಯಾದಲ್ಲಿ ಹೊಸಬರನ್ನ ನೋಡಿ ಜನರು ಆತಂಕಗೊಂಡಿದ್ದಾರೆ. ಆದರೆ ಇವರು ಹುಬ್ಬಳ್ಳಿಯಿಂದ ಬಂದಿದ್ದಾರೆ ಅನ್ನೋ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಏಳು ಮಂದಿ ಕೂಲಿ ಕಾರ್ಮಿಕರನ್ನು ಟೆಂಪೋವೊಂದರಲ್ಲಿ ಕೆಸಿ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಬಿಹಾರಿ ಕೂಲಿ ಕಾರ್ಮಿಕರು ಕಾಣಿಸಿಕೊಂಡಿದ್ದರಿಂದ ಗಾಯಿತ್ರಿನಗರ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಸದ್ಯಕ್ಕೆ ಪೊಲೀಸರು ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

Comments

Leave a Reply

Your email address will not be published. Required fields are marked *