ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವಪ್ರಸಾದ್, ನಿರಂಜನ್ ನಡುವೆ ಸಮರ – ಮತದಾರನ ಮನ ನಿರ್ಧಾರ

ಚಾಮರಾಜನಗರ: ಕಳೆದ 20 ದಿನಗಳಿಂದ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿಗೆ, ಪ್ರತಿಷ್ಠೆಗೆ ಸಾಕ್ಷಿಯಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಆರಂಭವಾಗಿದೆ.

ಸಹಕಾರ ಸಚಿವರಾಗಿದ್ದ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ಉಪ ಚುನಾವಣೆ ನಡೆಯುತ್ತಿದೆ. ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್‍ರನ್ನು ಅನುಕಂಪದ ಆಧಾರದ ಮೇಲೆ ಕಣಕ್ಕಿಳಿಸಿದೆ. ಇದೇ ಐದು ಬಾರಿ ಚುನಾವಣೆ ಸೋತಿರುವ ನಿರಂಜನ್ ಕುಮಾರ್‍ರನ್ನು ಬಿಜೆಪಿ ಸ್ಪರ್ಧೆಗೆ ಇಳಿಸಿದೆ.

ಪಕ್ಷೇತರ ಅಭ್ಯರ್ಥಿಗಳಾದ ಶಿವರಾಮ್, ಕೆ.ಸೋಮಶೇಖರ್, ಮಹಾದೇವ ಪ್ರಸಾದ್ ಬಿ ಮತ್ತು ರಿಪ್ಲಬಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಶಿವರಾಜು, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಎಂ, ಹೊನ್ನೂರಯ್ಯ ಸೇರಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 2,00,862 ಮತದಾರರಿದ್ದು, ಈ ಪೈಕಿ 1,00,144 ಪುರುಷ ಮತದಾರರು, 1,00,701 ಮಹಿಳಾ ಮತದಾರರಿದ್ದಾರೆ. ಕ್ಷೇತ್ರದಲ್ಲಿ 250 ಮತಗಟ್ಟೆಗಳಿವೆ.

Comments

Leave a Reply

Your email address will not be published. Required fields are marked *