ಇಂದು ಸಂಜೆ 5 ಗಂಟೆಗೆ ಮನೆಮನೆ ಪ್ರಚಾರ ಅಂತ್ಯ – ನಾಳೆ ಬೆಳಗ್ಗೆ 7ರಿಂದ ಮತದಾನ ಶುರು

ಬೆಂಗಳೂರು: ಜಿದ್ದಾಜಿದ್ದಿ, ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. 223 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.

ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕದನ ಕಲಿಗಳು ಮನೆಮನೆ ಪ್ರಚಾರಕ್ಕಿಳಿದಿದ್ದಾರೆ. ಇಂದು ಸಂಜೆ 5 ಗಂಟೆ ತನಕ ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಲಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರ ಬದಾಮಿಯಲ್ಲಿ ಶುಕ್ರವಾರ ರಾತ್ರಿಯೇ ಮನೆಮನೆ ಪ್ರಚಾರ ನಡೀತು. ಬದಾಮಿ ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ ಶ್ರೀರಾಮುಲು ಪರ ಮನೆ ಮನೆಗೆ ತೆರಳಿ ಮತಯಾಚಿಸಿದ್ರು. ಜೆಡಿಎಸ್ ತಾಲೂಕು ಅಧ್ಯಕ್ಷ ಅಪ್ಪಣ್ಣ ಹಿರೇಹಾಳ, ಅಭ್ಯರ್ಥಿ ಹನುಮಂತ ಮಾವಿನ ಮರದ ಪರ ಪ್ರಚಾರ ನಡೆಸಿದ್ರು. ಇಂದು ಕೂಡ ಮನೆ ಮನೆ ಪ್ರಚಾರ ಮತ್ತಷ್ಟು ರಂಗೇರಲಿದೆ.

Comments

Leave a Reply

Your email address will not be published. Required fields are marked *