ಮದ್ವೆ ನಂತ್ರ ವರ, ವಧುವಿನಿಂದ ಸುಮಲತಾ ಪರ ಮತಯಾಚನೆ

ರಾಮನಗರ: ಹೈ ವೋಲ್ಟೇಜ್ ಮಂಡ್ಯ ಲೋಕಸಭಾ ಚುನಾವಣೆಯ ಕದನದ ಬಿಸಿ ರಾಮನಗರಕ್ಕೂ ಹಬ್ಬಿದೆ. ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಬಳಿಕ ಸುಮಲತಾ ಪರ ಮತಯಾಚನೆ ಮಾಡಿದ್ದಾರೆ.

ವಧು ರೇಷ್ಮಾ ಹಾಗೂ ವರ ನಾಗರಾಜ್ ಮದುವೆಯಾದ ದಂಪತಿಯಾಗಿದ್ದು, ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರ ಮತಯಾಚಿಸಿದರು. ಕಳೆದ ಶನಿವಾರ ರೇಷ್ಮಾ ಹಾಗೂ ನಾಗರಾಜ್ ರಾಮನಗರ ತಾಲೂಕಿನ ಬಿಡದಿಯ ಎಸ್.ಪಿ ಕಲ್ಯಾಣ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮದುವೆ ಬಳಿಕ ದಂಪತಿಗಳು ಕಲ್ಯಾಣ ಮಂಟಪದ ಹೊರಗೆ ವೋಟ್ ಫಾರ್ ಸುಮಲತಾ ಎಂದು ಮತಯಾಚಿಸಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆಯ ವರ ನಾಗರಾಜ್ ಹಾಗೂ ವಧು ರೇಷ್ಮಾ ಮದುವೆಯಾದ ಮೇಲೆ ಸುಮಲತಾ ಪರ ವೋಟ್ ಹಾಕುವಂತೆ ಮನವಿ ಮಾಡಿದ್ದಾರೆ.

ಇದೀಗ ಮದುವೆ ನಂತರ ವರ ಹಾಗೂ ವಧು, ಸುಮಲತಾ ಅವರಿಗೆ ಮತ ಹಾಕುವಂತೆ ಮನವಿ ಮಾಡಿದ ವಿಡಿಯೋ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *