ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

ಕೀವ್: ರಷ್ಯಾ, ಉಕ್ರೇನ್ ಮೇಲೆ ದಾಳಿಯನ್ನು ಮುಂದುವರಿಸಿದೆ. ಸಂಧಾನದ ಮಾತುಕತೆಯ ನಿರೀಕ್ಷೆಗಳು ಸಫಲವಾಗುವಂತೆ ತೋರುತ್ತಿಲ್ಲ.  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್ ಜೊತೆಗಿನ ಸಂಧಾನದ ಮಾತುಕತೆ ಕುರಿತಾಗಿ ವ್ಯಂಗ್ಯವಾಡಿದ್ದಾರೆ.

ವಿದೇಶಿ ನಾಯಕರು ಮತ್ತು ರಷ್ಯಾದ ಅಧಿಕಾರಿಗಳೊಂದಿಗಿನ ಇತ್ತೀಚಿನ ಸಭೆಗಳಿಗೆ ಪುಟಿನ್ ಬಳಸಿದ ಉದ್ದನೆಯ ಮೇಜಿನ ಬಗ್ಗೆ ಉಕ್ರೇನ್ ಅಧ್ಯಕ್ಷರು ವ್ಯಂಗ್ಯ ಮಾಡಿದ್ದಾರೆ. ಪುಟಿನ್ ನಿಮಗೆ ನಾಯಕರೊಂದಿಗೆ ಹತ್ತಿರ ಕುಳಿತು ಮಾತನಾಡಲು ಭಯವೇ..? ಸಂಧಾನ ಮಾಡಲು ನನ್ನೊಂದಿಗೆ ಕುಳಿತುಕೊಳ್ಳಿ, ಆದರೆ 30 ಮೀಟರ್ ಅಂತರದಲ್ಲಿ ಅಲ್ಲ.. ನಾನೇನು ಕಚ್ಚುವುದಿಲ್ಲ. ಮತ್ತೇಕೆ ನಿಮಗೆ ಭಯ? ಬುಲೆಟ್ ಗಿಂತ ಮಾತು ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಮಾಡಿದ್ದ ಆರೋಪ ನಿರಾಕರಿಸಿದ ಭಾರತ!

ಉಕ್ರೇನ್‍ಗೆ ಯುದ್ಧವಿಮಾನಗಳನ್ನು ಒದಗಿಸಬೇಕು. ರಷ್ಯಾ ವಿರುದ್ಧ ಹೋರಾಡಲು ನಮಗೆ ಸಾಕಷ್ಟು ಮಿಲಿಟರಿ ನೆರವು ಬೇಕು ಎಂದು ಪಾಶ್ಚಿಮಾತ್ಯ ದೇಶಗಳಿಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಲ್ಲಿ ಇನ್ನೂ ದೊಡ್ಡದಾಗಿ ಯೋಚಿಸಬೇಕಿದೆ: ಮೋದಿ

ರಷ್ಯಾ ಮತ್ತು ಉಕ್ರೇನಿಯನ್ ಮಾತುಕತೆಗಳ ನಡುವಿನ ಮತ್ತೊಂದು ಸುತ್ತಿನ ಸಂಧಾನ ಮಾತುಕತೆಯ ನಿರೀಕ್ಷೆಗಳು ಭರವಸೆಯಂತೆ ತೋರುತ್ತಿಲ್ಲ. ಯಾವುದೇ ಪದಗಳು ಗುಂಡುಗಳಿಗಿಂತ ಹೆಚ್ಚು ಮುಖ್ಯ. ಉಕ್ರೇನ್‍ಗೆ ಬೆಂಬಲ ನೀಡಲು ಜಗತ್ತು ತುಂಬಾ ನಿಧಾನವಾಗಿದೆ ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *