ವಿಶ್ವಕಪ್ ಬಗ್ಗೆ ಪೋಸ್ಟ್ ಹಾಕಿ ಟ್ರೋಲ್ ಆದ ವಿವೇಕ್

ಮುಂಬೈ: ಬಾಲಿವುಡ್ ನಟ ವಿವೇಕ್ ಒಬೇರಾಯ್ ವಿಶ್ವಕಪ್ ಬಗ್ಗೆ ಜಿಫ್ ವಿಡಿಯೋ ಟ್ವೀಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.

ಭಾರತ ತಂಡ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ವಿರುದ್ಧ ಸೋಲು ಕಂಡಿತ್ತು. ಈ ಬಗ್ಗೆ ವಿವೇಕ್, ಜಿಫ್ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ವಿವೇಕ್ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ನೀಲಿ ಬಣ್ಣದ ಟೀ-ಶರ್ಟ್ ಧರಿಸಿ ಬರುತ್ತಿದ್ದ ವ್ಯಕ್ತಿಯನ್ನು ಯುವತಿಯೊಬ್ಬಳು ತಬ್ಬಿಕೊಳ್ಳುವ ರೀತಿ ಆತನ ಮುಂದೆ ಹೋಗುತ್ತಾಳೆ. ಬಳಿಕ ಆ ವ್ಯಕ್ತಿ ಹಿಂದೆ ಬರುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಯುವತಿ ತಬ್ಬಿಕೊಂಡಿದ್ದಾಳೆ. ಈ ವಿಡಿಯೋ ಹಾಕಿ ವಿವೇಕ್ ಅದಕ್ಕೆ, “ವಿಶ್ವಕಪ್‍ನ ಸೆಮಿಫೈನಲ್‍ನಲ್ಲಿ ಭಾರತದ ಅಭಿಮಾನಿಗಳಿಗೆ ಇದೇ ರೀತಿ ಆಗಿದೆ” ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ವಿವೇಕ್ ಅವರ ಟ್ವೀಟ್ ನೋಡಿ ಕೆಲವರು ‘ನೀವು ನಿಮ್ಮ ವೃತ್ತಿಜೀವನದ ಆಕಾಂಕ್ಷೆಗಳ ಹಿಂದೆ ಹೊರಟಿದ್ದಾಗ ನಿಮಗೂ ಹೀಗೆ ಆಗಿದೆ. ನಿಮ್ಮ ಯಾವುದಾದರೂ ಸಿನಿಮಾ 50 ಕೋಟಿ ರೂ. ದಾಟಿದ್ದರೆ ಹೇಳಿ ನಾನು ಅದನ್ನು ವೀಕ್ಷಿಸಲು ಇಷ್ಟಪಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ನಮ್ಮ ಭಾರತ ತಂಡ ಎಲ್ಲ ತಂಡದ ವಿರುದ್ಧ ಗೆಲುವು ಸಾಧಿಸಿ ಸೆಮಿ ಫೈನಲ್ ತಲುಪಿದೆ. ನಿಮ್ಮ ತರಹ ಫ್ಲಾಪ್ ಸಿನಿಮಾಗಳನ್ನು ಮಾಡಿಲ್ಲ. ಭಾರತ ತಂಡವನ್ನು ಗೌರವಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಈ ಹಿಂದೆ ವಿವೇಕ್ ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಎಂದು ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಂಡಿದ್ದರು.

Comments

Leave a Reply

Your email address will not be published. Required fields are marked *