ವೈರಿ ದೇಶವನ್ನು ಪಕ್ಕದಲ್ಲೇ ಇರಿಸಿಕೊಂಡು ಪ್ರಧಾನಿಗೆ ದಿಗ್ಬಂಧನ: ಪೇಜಾವರಶ್ರೀ ಕಳವಳ

ಉಡುಪಿ: ಪ್ರಧಾನಿ ಮೋದಿ ಅವರ ಪಂಜಾಬ್ ಭೇಟಿಯ ವೇಳೆ ಉಂಟಾಗಿರುವ ಭದ್ರತಾ ವೈಫಲ್ಯಕ್ಕೆ ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

ಪಂಜಾಬ್ ನಲ್ಲಿ ಫ್ಲೈಓವರ್ ಮೇಲೆ ಇಪ್ಪತ್ತು ನಿಮಿಷಗಳ ಕಾಲ ಮೋದಿ ಅವರು ಸಿಲುಕಿದ ಕುರಿತು ಮಾತನಾಡಿದ ಅವರು, ಇದು ಆಘಾತಕಾರಿ ವಿಚಾರವಾಗಿದೆ. ವೈರಿ ದೇಶವನ್ನು ಪಕ್ಕದಲ್ಲೇ ಇರಿಸಿಕೊಂಡು ಪ್ರಧಾನಿಗೆ ದಿಗ್ಬಂಧನ ಹಾಕಲಾಗಿದೆ. ರಾಜ ಯಾರೇ ಇರಲಿ ಈ ತರದ ಘಟನೆ ನಡೆಯಬಾರದು ಎಂದರು. ಇದನ್ನೂ ಓದಿ:  ನಾಯಿ ಹುಟ್ಟುಹಬ್ಬ ಆಚರಿಸಲು 11 ಲಕ್ಷ ರೂ. ಖರ್ಚು ಮಾಡಿದ ಮಹಿಳೆ

ಅಧಿಕಾರದಲ್ಲಿರುವ ರಾಜನನ್ನು ಕಳೆದುಕೊಂಡರೆ ಉಂಟಾಗಬಹುದಾದ ದೊಂಬಿಗಳನ್ನು ಊಹಿಸಲು ಅಸಾಧ್ಯ. ಇಂತಹ ಘಟನೆ ಇನ್ನೊಮ್ಮೆ ಮರುಕಳಿಸಬಾರದು. ಶತ್ರು ದೇಶಗಳು ಇಂತಹ ಅವಕಾಶಕ್ಕೆ ಕಾಯುತ್ತಿರುತ್ತವೆ. ದೇಶದ ಒಳಗೂ ಅದೆಷ್ಟೋ ದೊಂಬಿಗಳು ನಡೆಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ದೇಶದಲ್ಲಿ ಈ ಹಿಂದೆಯೂ ಇಂತಹ ದುರ್ಘಟನೆಗಳು ಸಾಕಷ್ಟು ನಡೆದಿವೆ. ಆವಾಗೆಲ್ಲಾ ಏನೇನೋ ದೊಂಬಿಗಳಿಗೆ ಈ ದೇಶ ಸಾಕ್ಷಿಯಾಗಿದೆ. ಇಂತಹ ದುರ್ಘಟನೆಗಳು ನಡೆಯದಂತೆ ದೇವರಲ್ಲಿ ಮತ್ತು ಗುರುಗಳಾದ ವಿಶ್ವೇಶತೀರ್ಥರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *