ಮಾಲ್ಡೀವ್ಸ್‌ನಲ್ಲಿ ಮಲಯಾಳಿ ಸುಂದರಿ ಪ್ರಿಯಾ

ಮಾಲಿವುಡ್ (Mollywood) ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ (Priya Prakash Varrier) ಸದ್ಯ ಮಾಲ್ಡೀವ್ಸ್ (Maldives) ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ತನ್ನ ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಈ ಕುರಿತ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ತನ್ನ ಕಣ್ಸನ್ನೆನಿಂದ ರಾತ್ರೋ ರಾತ್ರಿ ಸ್ಟಾರ್ ಆದ ನಟಿ ಪ್ರಿಯಾ ವಾರಿಯರ್, ಬಳಿಕ ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದರು. ಇದೀಗ ‘ವಿಷ್ಣು ಪ್ರಿಯಾ’ (Vishnupriya) ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ನಟ ಶ್ರೇಯಸ್‌ಗೆ (Shreyas) ಜೋಡಿಯಾಗಿ ಬರುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ತೆರೆಗೆ ಬರಲಿದೆ.

ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ಗೆ ಬ್ರೇಕ್ ಹಾಕಿ, ವೆಕೇಷನ್‌ಗಾಗಿ ಮಾಲ್ಡೀವ್ಸ್‌ಗೆ ನಟಿ ಪ್ರಿಯಾ ಹಾರಿದ್ದಾರೆ. ಮಾಲ್ಡೀವ್ಸ್‌ ಸುಂದರ ತಾಣಗಳಿಗೆ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಶಾರ್ಟ್ ಡ್ರೆಸ್ ಧರಿಸಿ ಪ್ರಿಯಾ ಮಸ್ತ್ ಆಗಿ ಮಿಂಚಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಪಾಲಕ್ ಜೊತೆ ಕಿಸ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇಬ್ರಾಹಿಂ ಅಲಿ ಖಾನ್

ಪ್ರಿಯಾ ವಾರಿಯರ್ ಕೈಯಲ್ಲಿ 6ಕ್ಕೂ ಹೆಚ್ಚು ಸಿನಿಮಾಗಳಿವೆ. ಕನ್ನಡ, ಮಲಯಾಳಂ, ಹಿಂದಿ ಸೇರಿದಂತೆ ಹಲವು ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ. ಕಣ್ಸನ್ನೆ ಬೆಡಗಿ ಸಿನಿಮಾಗಳನ್ನ ನೋಡಲು ಫ್ಯಾನ್ಸ್ ಎದುರು ನೋಡ್ತಿದ್ದಾರೆ.