ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

ನವದೆಹಲಿ: ವಿರಾಟ್ ಕೊಹ್ಲಿ- ಅನುಷ್ಕಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇಟಲಿಯ ಖಾಸಗಿ ರೆಸಾರ್ಟ್ ನಲ್ಲಿ ಪಂಜಾಬಿ ಸಂಪ್ರದಾಯದಂತೆ ನಡೆದ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು ಮತ್ತು ಗೆಳೆಯರು ಮಾತ್ರ ಭಾಗಿಯಾಗಿದ್ದರು.

ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಅನುಷ್ಕಾ ಶರ್ಮಾಗೆ ಇಷ್ಟವಾದ ರೀತಿಯ ಡೈಮಂಡ್ ರಿಂಗ್ ನೀಡಿದ್ದಾರೆ. ಈ ಉಂಗುರಕ್ಕಾಗಿ ಬರೋಬ್ಬರಿ 3 ತಿಂಗಳ ಕಾಲ ಹುಡುಕಾಟ ನಡೆಸಿದ್ದರಂತೆ. ಅಂತಿಮವಾಗಿ ಆಸ್ಟ್ರೇಲಿಯಾದ ಖ್ಯಾತ ಜ್ಯುವೆಲ್ಲರಿ ಎಕ್ಕಾ ಡಿಸೈನರ್‍ರಿಂದ ವಿಶೇಷ ರಿಂಗ್ ವಿನ್ಯಾಸ ಮಾಡಿಸಿದ್ದಾರೆ.

ಈ ಉಂಗುರ ವಜ್ರ ಖಚಿತವಾಗಿದ್ದು, ನೋಡಲು ತುಂಬಾ ಸುಂದರವಾಗಿದೆ. ಪ್ರತಿ ಬಾರಿ ಈ ರಿಂಗ್ ನೋಡಿದರೆ ವಿಭಿನ್ನ ರೀತಿಯಲ್ಲಿ ಕಾಣಿಸುತ್ತದೆ. ಆಶ್ಚರ್ಯಕರವಾದ ಅಂಶಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಶೇಷ ಉಂಗುರಕ್ಕೆ ವಿರಾಟ್ ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅನುಷ್ಕಾ ನಿಶ್ಚಿತಾರ್ಥಕ್ಕಾಗಿ ಖ್ಯಾತ ವಸ್ತ್ರ ವಿನ್ಯಾಸಕಾರ ಸಬ್ಯಸಾಚಿ ವಿನ್ಯಾಸಗೊಳಿಸಿದ್ದ ವೆಲ್ವೆಟ್ ಸೀರೆ ಧರಿಸಿದ್ದರು. ಸೀರೆಯಲ್ಲಿ ಮುತ್ತು ಹಾಗೂ ಅತ್ಯುತ್ತಮ ಗುಣಮಟ್ಟದ ಝರ್ದೋಸಿ, ಮರೋರಿ ಬಳಸಿ ಕೈಯಿಂದ ವಿನ್ಯಾಸ ಮಾಡಲಾಗಿತ್ತು. ವಿರಾಟ್ ಬೂದು ಬಣ್ಣದ ಟೈ ಮತ್ತು ನೀಲಿಬಣ್ಣದ ಸೂಟ್ ಧರಿಸಿದ್ದರು.

ಇಟಲಿಯ ಟಸ್ಕನಿ ನಗರದ `ಬೋಗೋ ಫಿನೊಕಿಯೆಟೊ’ ಎಂಬ ದುಬಾರಿ ರೆಸಾರ್ಟ್ ನಲ್ಲಿ ದ್ರಾಕ್ಷಿ ಹಣ್ಣಿನ ತೋಟದ ನಡುವೆ ಇರುವ ಸ್ವರ್ಗದಂಥಹ ತಾಣದಲ್ಲಿ ಸೋಮವಾರ ವಿರಾಟ್ ಹಾಗೂ ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಿಂಪಲ್ ಆಗಿ ಆದರೂ ಪ್ರತಿಯೊಂದು ವಸ್ತುಗಳು ಕೂಡ ತುಂಬಾ ದುಬಾರಿಯಾಗಿತ್ತು.

3 ವರ್ಷಗಳ ಹಿಂದೆ ಅನುಷ್ಕಾ ತಮ್ಮ ಮದುವೆಯ ಕನಸಿನ ಬಗ್ಗೆ ಹೇಳಿದ್ದರು. ಆ ಕನಸಿನಂತೆ ವಿರಾಟ್ ಅವರನ್ನು ಮದುವೆಯಾಗಿದ್ದಾರೆ. ಆದರೆ ಈ ಜೋಡಿ ಮದುವೆ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಳ್ಳುವವರೆಗೂ ಅಧಿಕೃತವಾಗಿ ಯಾರಿಗೂ ಹೇಳಿರಲಿಲ್ಲ.

ಡಿಸೆಂಬರ್ 11 ರಂದು “ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು” ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದರು.

https://www.youtube.com/watch?v=gHvF38xCsiY

https://www.instagram.com/p/Bcq9v7NnyHB/?hl=en&tagged=virushka

Comments

Leave a Reply

Your email address will not be published. Required fields are marked *