ಪ್ರೀತಿ ಝಿಂಟಾ ಟೀಂಗೆ ಗುಡ್‍ಬೈ ಹೇಳಿದ್ರು ಸೆಹ್ವಾಗ್!

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಅವರು ಐಪಿಎಲ್‍ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಿಂದ ಹೊರಬಂದಿದ್ದಾರೆ ಈ ವಿಷಯವನ್ನು ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

ಸೆಹ್ವಾಗ್ ಅವರು ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಎಲ್ಲಾ ಒಳ್ಳೆಯ ವಿಷಯಗಳು ಕೊನೆಗೊಳ್ಳಬೇಕು ಮತ್ತು ನಾನು ಕಿಂಗ್ಸ್ ಇಲೆವೆನ್ ಪಂಜಾಬ್‍ನಲ್ಲಿ 2 ಸೀಸನ್ ನಲ್ಲಿ ಆಟಗಾರನಾಗಿ ಮತ್ತು 3 ಸೀಸನ್ ಗಳಲ್ಲಿ ಮೆಂಟರ್ ಆಗಿ ಅದ್ಭುತ ಸಮಯವನ್ನು ಕಳೆದಿದ್ದೇನೆ. ಕಿಂಗ್ಸ್ ಇಲೆವೆನ್ ಅವರೊಂದಿಗೆ ನನ್ನ ಸಹಯೋಗವು ಕೊನೆಗೊಳ್ಳುತ್ತದೆ. ನಾನು ಇಲ್ಲಿ ಒಳ್ಳೆಯ ಕ್ಷಣಗಳನ್ನು ಕಳೆದಿದ್ದೇನೆ ಅದಕ್ಕೆ ನಾನು ಕೃತಜ್ಞರಾಗಿರುತ್ತೇನೆ. ಮುಂದಿನ ದಿನಗಳಿಗೆ ಶುಭವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾನ್ ತಂಡ ಬಿಟ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಹಿಂದಿನ ಸರಣಿಯಲ್ಲಿ ಸೆಹ್ವಾಗ್ ಹಾಗೂ ಕಿಂಗ್ಸ್ ಇಲವೆನ್ ಮಾಲೀಕಳಾದ ಪ್ರೀತಿ ಝಿಂಟಾ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಚಾರವಾಗಿ ನನ್ನ ಮತ್ತು ಸೆಹ್ವಾಗ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ಸ್ಪಷ್ಟನೆ ನೀಡಿದ್ದರು.

ನಮ್ಮ ಪರವಾಗಿ ಸುದ್ದಿ ಪ್ರಕಟವಾಗುವಂತೆ ನಾವು ಮಾಧ್ಯಮಗಳಿಗೆ ಹಣ ನೀಡಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಎಲ್ಲವೂ ಸುಳ್ಳು ಎಂದು ಪ್ರೀತಿ ಝಿಂಟಾ ಟ್ವೀಟ್ ಮಾಡಿದ್ದರು. ರಾಜಸ್ಥಾನದ ವಿರುದ್ಧ ಪಂದ್ಯದಲ್ಲಿ ಸುಲಭ ಮೊತ್ತವನ್ನು ಬೆನ್ನತ್ತಲು ತಂಡ ವಿಫಲವಾಗಲು ಮೆಂಟರ್ ಸೆಹ್ವಾಗ್ ಅವರ ನಿರ್ಧಾರವೇ ಕಾರಣ ಎಂದು ಪ್ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿತ್ತು.

ರಾಜಸ್ಥಾನ ಪಂದ್ಯದಲ್ಲಿ ನಾಯಕ ಆಶ್ವಿನ್‍ಗೆ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಿ ನಂಬರ್ 3 ಸ್ಥಾನದಲ್ಲಿ ಕಳಿಸಲಾಗಿತ್ತು. ಆದರೆ ಪಂದ್ಯದಲ್ಲಿ ಅಶ್ವಿನ್ ಶೂನ್ಯ ಸುತ್ತುವ ಮೂಲಕ ಎಲ್ಲ ಲೆಕ್ಕಾಚಾರನ್ನು ತಲೆ ಕೆಳಗೆ ಮಾಡಿದ್ದರು. ಸದ್ಯ ಪಂದ್ಯದ ಫಲಿತಾಂಶದಿಂದ ಪ್ರೀತಿ ಅಸಮಾಧಾನಗೊಂಡಿದ್ದರು ಎಂದು ಬರೆಯಲಾಗಿತ್ತು.

ಪಂದ್ಯದ ಬಳಿಕ ಆಟಗಾರರು ಮೈದಾನದಿಂದ ಮರಳುವ ಮುನ್ನವೇ ಪ್ರೀತಿ ಝಿಂಟಾ ಈ ಕುರಿತು ಪ್ರಶ್ನೆ ಮಾಡಿದ್ದರು. ಆದ್ರೆ ಸೆಹ್ವಾಗ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ಲೇಆಫ್ ಗೆ ಆಯ್ಕೆ ಆಗುವ ಎಲ್ಲಾ ಅವಕಾಶ ಇರುವ ವೇಳೆ ಈ ರೀತಿಯ ಗೊಂದಲಗಳಿಗೆ ಅವಕಾಶ ನೀಡಬಾರದು. ಇದು ಆಟಗಾರ ಮೇಲೆ ಪರಿಣಾಮ ಉಂಟಾಗಬಹುದು ಎಂದು ಸೆಹ್ವಾಗ್ ಪ್ರತಿಕ್ರಿಯೇ ನೀಡಿಲ್ಲ ಎಂದು ವರದಿ ತಿಳಿಸಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *