ನನಗೆ ಚಾನ್ಸ್ ಯಾರು ಕೊಡ್ತಾರೆ?: ಸೆಹ್ವಾಗ್

Sehwag Hits 100,000 Followers on Koo within 15 Days of Joining the Platform

ನವದೆಹಲಿ: ತನಗೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರಾಗುವ ಆಸೆ ಇದ್ದು, ಆ ಅವಕಾಶವನ್ನು ಯಾರು? ಕೊಡುತ್ತಾರೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವ ಸೆಹ್ವಾಗ್, ಜನರು ಯೋಚನೆ ಮಾಡುವಂತಹ ಅಂಶಗಳನ್ನು ಪ್ರಸ್ತಾಪ ಮಾಡಿ ಟ್ವೀಟ್ ಮಾಡುವುದು ಸಾಮಾನ್ಯ. ಈ ಹಿಂದೆ ಕೂಡ ಸೆಹ್ವಾಗ್ ಹಲವು ಆಸ್ತಕಿದಾಯಕ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಆದರೆ ಸದ್ಯದ ಟ್ವೀಟ್ ಹಿಂದಿನ ಉದ್ದೇಶವನ್ನು ಮಾತ್ರ ಸೆಹ್ವಾಗ್ ಬಿಟ್ಟುಕೊಟ್ಟಿಲ್ಲ.

ಸೆಹ್ವಾಗ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹಲವರು, ‘ನಿಮಗೆ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯತ್ವ ಪಡೆಯುವ ಅವಕಾಶ ಲಭಿಸಬೇಕೆಂದು’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಅಲ್ಲದೇ ‘ನಿಮಗೆ ಆಯ್ಕೆ ಸಮಿತಿಯ ಜವಾಬ್ದಾರಿ ನೀಡಿದರೆ ಟೀಂ ಇಂಡಿಯಾಗೆ ಹೊಸ ಉತ್ಸಾಹ ಲಭಿಸಲಿದೆ’ ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಸ್ಫೋಟಕ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದ ಸೆಹ್ವಾಗ್ 2001 ರಲ್ಲಿ ಪಾದಾರ್ಪಣೆ ಮಾಡಿದ್ದ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಟೆಸ್ಟ್ ವೃತ್ತಿ ಜೀವನದಲ್ಲಿ 104 ಪಂದ್ಯಗಳನ್ನು ಆಡಿರುವ ಸೆಹ್ವಾಗ್ 8,586 ರನ್ ಗಳಿಸಿದ್ದು, ಇದರಲ್ಲಿ 23 ಶತಕ, 32 ಅರ್ಧ ಶತಕ ಸೇರಿದೆ. ಅಲ್ಲದೇ ಟೆಸ್ಟ್ ಕ್ರಿಕೆಟ್‍ನಲ್ಲಿ ಸೆಹ್ವಾಗ್ ಅವರ ಗರಿಷ್ಠ ಸ್ಕೋರ್ 319 ರನ್. ಏಕದಿನ ಕ್ರಿಕೆಟ್‍ನಲ್ಲಿ 251 ಪಂದ್ಯಗಳನ್ನು ಆಡಿರುವ ಸೆಹ್ವಾಗ್ 8,273 ರನ್ ಸಿಡಿಸಿದ್ದು, 219 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಉಳಿದಂತೆ 19 ಟಿ20 ಪಂದ್ಯಗಳಿಂದ ಸೆಹ್ವಾಗ್ 394 ರನ್ ಗಳಿಸಿದ್ದಾರೆ.

Comments

Leave a Reply

Your email address will not be published. Required fields are marked *