ನವದೆಹಲಿ: ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ರವರು ಹಾಕಿದ್ದ `ಮೆಸ್ಸಿ ಕಿ ಚಾಚಾ’ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಜಗತ್ತಿನಾದ್ಯಂತ ಫುಟ್ಬಾಲ್ ಜ್ವರದ ನಡುವೆ ವಿರೇಂದ್ರ ಸೆಹ್ವಾಗ್ ರವರು ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ. ಟ್ವೀಟ್ ನಲ್ಲಿ ಓರ್ವ ಹಿರಿಯ ವ್ಯಕ್ತಿ ಫುಟ್ಬಾಲ್ ನ್ನು ತನ್ನ ಬರಿಗಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಹಾಕಿ ಇವರು ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೆಸ್ಸಿಯವರ ಅಜ್ಜ ಎಂದು ಫುಟ್ಬಾಲ್ ಅಭಿಮಾನಿಗಳ ಕಾಲೆಳೆದಿದ್ದಾರೆ.
Forget France , England, Croatia, here is the man #FRABEL pic.twitter.com/pzBkC4LNTn
— Virrender Sehwag (@virendersehwag) July 11, 2018
ವಿಡಿಯೋದಲ್ಲಿ ಹಿರಿಯರೊಬ್ಬರು ಸತತವಾಗಿ ಮೂರು ಬಾರಿ ವಿಭಿನ್ನ ರೀತಿಯಲ್ಲಿ ಫುಟ್ಬಾಲನ್ನು ಒಂದೇ ಮನೆಯೊಂದರ ತೆರೆದ ಸಣ್ಣ ಕಿಟಕಿಯಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋಗೆ ಫ್ರಾನ್ಸ್, ಇಂಗ್ಲೆಂಡ್, ಕ್ರೋಷಿಯಾವನ್ನು ಮರೆತುಬಿಡಿ ಎಂದು ಬರೆದಿದ್ದಾರೆ, ಇನ್ ಸ್ಟಾಗ್ರಾಮ್ ನಲ್ಲಿ `ಮೆಸ್ಸಿ ಕಾ ಚಾಚಾ’ ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಟ್ವೀಟ್ಟರ್ ನಲ್ಲಿ ಸೆಹ್ವಾಗ್ ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಲೇ, ಸುಮಾರು 26 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 4,600 ಮಂದಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇನ್ ಸ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು 3.76 ಲಕ್ಷ ಮಂದಿ ನೋಡಿದ್ದಾರೆ.
ವಿರೇಂದ್ರ ಸೆಹ್ವಾಗ್ ರವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ.
https://www.instagram.com/p/BlE40ZcnsxD/?hl=en&taken-by=virendersehwag

Leave a Reply