1 ಲಕ್ಷ + ಅಭಿಮಾನಿಗಳ ಮುಂದೆ ಪಾಕ್‌ ಆಟಗಾರನನ್ನು ಟ್ರೋಲ್‌ಗೈದ ಕೊಹ್ಲಿ

ಅಹಮದಾಬಾದ್‌: ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರಿಕೆಟ್‌ (Wordl Cup Cricket) ಪಂದ್ಯದಲ್ಲಿ ಪಾಕ್‌ (Pakistan) ತಂಡದ ರಿಜ್ವಾನ್‌ ಮೊಹಮ್ಮದ್‌ (Mohammad Rizwan) ಅವರನ್ನು ವಿರಾಟ್‌ ಕೊಹ್ಲಿ ಟ್ರೋಲ್‌ ಮಾಡಿದ್ದಾರೆ.

12.3 ಓವರ್‌ನಲ್ಲಿ ಇಮಾಮ್‌-ಉಲ್‌-ಹಕ್‌ ಔಟಾದ ನಂತರ ರಿಜ್ವಾನ್‌ ಕ್ರೀಸ್‌ಗೆ ಆಗಮಿಸಿದರು. ಈ ವೇಳೆ ಗಾರ್ಡ್‌ ತೆಗೆದುಕೊಳ್ಳಲು ರಿಜ್ವಾನ್‌ ಕೆಲ ನಿಮಿಷ ತೆಗೆದುಕೊಂಡರು. ಅಂದಾಜು ಬ್ಯಾಟರ್‌ ತೆಗೆದುಕೊಳ್ಳುವ ಸೆಕೆಂಡ್‌ಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದಕ್ಕೆ ಕೊಹ್ಲಿ (Virat Kohli) ವಾಚ್‌ ಕಟ್ಟುವ ಎಡಗೈನ್ನು ನೋಡಿ “ಎಷ್ಟು ಸಮಯ ಎಂದು” ಪ್ರಶ್ನೆ ಮಾಡುವಂತೆ ಟ್ರೋಲ್‌ ಮಾಡಿದರು.

https://twitter.com/RajeshKuri16/status/1713142199968559597

ಶ್ರೀಲಂಕಾ ವಿರುದ್ಧ ಸೆಂಚೂರಿ ಸಿಡಿಸಿದ್ದ ರಿಜ್ವಾನ್‌ ಈ ಪಂದ್ಯದಲ್ಲಿ 1 ರನ್‌ನಿಂದ ಅರ್ಧಶತಕ ವಂಚಿತರಾದರು. 69 ಎಸೆತ ಎದುರಿಸಿದ ರಿಜ್ವಾನ್‌ 7 ಬೌಂಡರಿಯೊಂದಿಗೆ 49 ರನ್‌ಗಳಿಸಿ ಔಟಾದರು. ಪಾಕಿಸ್ತಾನ 29.3 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 155 ರನ್‌ಗಳಿಸಿ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಬಾಬರ್‌ ಅಜಂ ಔಟಾದರೋ ಅಲ್ಲಿಂದ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದಲ್ಲಿ ಯಾರು ಪ್ರತಿರೋಧ ನೀಡದ ಪರಿಣಾಮ ಕೇವಲ 36 ರನ್‌ಗಳ ಅಂತರದಲ್ಲಿ 8 ವಿಕೆಟ್‌ ಕಳೆದುಕೊಂಡು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಸರ್ವಪತನ ಕಂಡಿತು.  ಇದನ್ನೂ ಓದಿ: Ind Vs Pak: ಪಾಕ್‌ ತಂಡಕ್ಕೆ ಅಗೌರವ ತೋರಬೇಡಿ – ಟೀಂ ಇಂಡಿಯಾ ಫ್ಯಾನ್ಸ್‌ಗೆ ಗಂಭೀರ್‌ ಮತ್ತೆ ಕ್ಲಾಸ್‌

ಬಾಬರ್‌ ಅಜಂ (Babar Azam) ಮತ್ತು ರಿಜ್ವಾನ್‌ (Mohammad Rizwan) 3ನೇ ವಿಕೆಟಿಗೆ 103 ಎಸೆತಗಳಲ್ಲಿ 82 ರನ್‌ ಜೊತೆಯಾಟವಾಡಿದ್ದರು. 50 ರನ್‌ (58 ಎಸೆತ, 7 ಬೌಂಡರಿ) ಹೊಡೆದಿದ್ದ ಅಜಂ ಅವರನ್ನು ಸಿರಾಜ್‌ ಬೌಲ್ಡ್‌ ಮಾಡಿದರೆ 49 ರನ್‌ (69 ಎಸೆತ, 7 ಬೌಂಡರಿ) ಹೊಡೆದಿದ್ದ ರಿಜ್ವಾನ್‌ ಅವರನ್ನು ಬುಮ್ರಾ ಬೌಲ್ಡ್‌ ಮಾಡಿದರು.

ಬುಮ್ರಾ , ಸಿರಾಜ್‌, ಪಾಂಡ್ಯ, ಕುಲದೀಪ್‌ ಯಾದವ್‌ , ಜಡೇಜಾ ತಲಾ ಎರಡು ವಿಕೆಟ್‌ ಪಡೆದರು. ಬುಮ್ರಾ 7 ಓವರ್‌ ಅದರಲ್ಲಿ 1 ಮೇಡನ್‌ ಸೇರಿ 19 ರನ್‌ ನೀಡಿದರೆ ಕುಲದೀಪ್‌ ಯಾದವ್‌ 10 ಓವರ್‌ ಹಾಕಿ 35 ರನ್‌ ನೀಡಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]