ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಕನ್ನಡದಲ್ಲಿ ಧನ್ಯವಾದ

ಬೆಂಗಳೂರು: ಐಪಿಎಲ್ 2019ನೇ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ತಂಡ ಹೊರಬಿದ್ದಿದ್ದರೂ ಅಭಿಮಾನಿಗಳು ತಂಡಕ್ಕೆ ಬೆಂಬಲ ನೀಡಿದ್ದರು. ಈಗ ಅಭಿಮಾನಿಗಳ ಪ್ರೋತ್ಸಾಹ ನೋಡಿ ನಾಯಕ ವಿರಾಟ್ ಕೊಹ್ಲಿ ಕನ್ನಡದಲ್ಲೇ ಧನ್ಯವಾದ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಫೋಟೋ, ತಮ್ಮ ತಂಡದ ಫೋಟೋ ಹಾಗೂ ಬೆಂಗಳೂರಿನ ಚಿನ್ನಾಸ್ವಾಮಿ ಕ್ರೀಡಾಂಗಣ ಸಿಬ್ಬಂದಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಕನ್ನಡದಲ್ಲಿಯೇ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನಮಗೆ ಪ್ರೀತಿ ಹಾಗೂ ಬೆಂಬಲ ನೀಡಿದ್ದ ನನ್ನ ತಂಡಕ್ಕೆ, ಅಭಿಮಾನಿಗಳಿಗೆ, ಕ್ರೀಡಾಂಗಣದ ಸಿಬ್ಬಂದಿಗೆ ಹಾಗೂ ನಮ್ಮನ್ನು ಬೆಂಬಲಿದ ಸಿಬ್ಬಂದಿಗೆ ಧನ್ಯವಾದಗಳು. ನಾವು ಮುಂದಿನ ವರ್ಷ ಮತ್ತಷ್ಟು ಶಕ್ತಿಶಾಲಿಯಾಗಿ ಬರುತ್ತೇವೆಂದು ಮಾತು ನೀಡುತ್ತೇನೆ. “ನೀವು ಇಲ್ಲಾಂದ್ರೆ ನಾವು ಏನು ಅಲ್ಲಾ” ಎಂದು ಕನ್ನಡದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.

ವಿರಾಟ್ ಅವರ ಈ ಪೋಸ್ಟ್ ಗೆ ಹೆಚ್ಚು ಲೈಕ್ಸ್ ಹಾಗೂ ಕಮೆಂಟ್ಸ್ ಬರುತ್ತಿದೆ. ಆರ್‌ಸಿಬಿ ತಂಡ ಯಾವ ರೀತಿಯಾಗಿ ಆಡಿದರೂ ನಾವು ಯಾವಾಗಲೂ ಬೆಂಬಲ ನೀಡುತ್ತೇವೆ. ಮುಂದಿನ ವರ್ಷ ಚೆನ್ನಾಗಿ ಆಟವನ್ನು ಆಡಿ ಎಂದು ಕಮೆಂಟ್ ಮಾಡಿದ್ದಾರೆ.

ಆರ್‌ಸಿಬಿ ಒಟ್ಟು 14 ಪಂದ್ಯದಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ, 8 ಪಂದ್ಯದಲ್ಲಿ ಸೋಲು ಕಂಡಿದೆ. ಸದ್ಯ ಆರ್‌ಸಿಬಿ 11 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ.

Comments

Leave a Reply

Your email address will not be published. Required fields are marked *